ತುಮಕೂರು: 'ಡಿ.ಕೆ.ಶಿವಕುಮಾರ್ 500 ಕೋಟಿ ರೂ. ಆಫರ್ ಮಾಡಿದ್ರು, ಆದರೆ ನಾನದನ್ನು ತಿರಸ್ಕರಿಸಿದ್ದೆ' ಎಂದು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್. ಪುರದಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

''ಮೊನ್ನೆ ನನ್ನನ್ನು ಮತ್ತು ಜಿ.ಟಿ.ದೇವೇಗೌಡರನ್ನು ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಕರೆಸಿದ್ರು. "ನಾನು ಮುಖ್ಯಮಂತ್ರಿ, ನನ್ನ ಮಾತು ಕೇಳ್ಬೇಕು' ಅಂತಂದ್ರು.. ನಾನು ನಮ್ಮ ಅಪ್ಪನ ಮಾತೇ ಕೇಳೋದಿಲ್ಲ. ನಿನ್ನ ಮಾತು ಯಾಕೆ ಕೇಳ್ಬೇಕು ಅಂದೆ. ನೀನು ಬರದಿದ್ದರೆ ಮಸಾಲೆ ಜಯರಾಂಗೆ ಟಿಕೆಟ್ ಕೊಡ್ತೀನಿ ಅಂತಾನೆ. ಕೊಡಪ್ಪ, ನಾನೇನು ಬೇಡ ಅಂತೀನಾ ಅಂದೆ. ನಾನು ಹೇಳಿದೆ ಈ ರಾಜ್ಯಕ್ಕೆ 37 ವರ್ಷಗಳಿಂದ ನೌಕರರ ಸಂಘದ ಅಧ್ಯಕ್ಷ ನಾನು. ಬಹಳ ಜನ ಮುಖ್ಯಮಂತ್ರಿ ನೋಡಿದ್ದೀನಿ ಅಂದೆ. ಅದಕ್ಕೆ ಅವರು ನಕ್ಕು ಸುಮ್ಮನಾದ್ರು'' ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದ್ದಾರೆ.

"500 ಕೋಟಿ ರೂ. ಕೊಡ್ತೀನಿ ಬಾ ಅಂದ್ರು, ನಾನು ಹೋಗಿಲ್ಲ. ಪಕ್ಷವನ್ನು ಬಿಟ್ಟು ಹೋದರೆ ರೈತರು ಮೆಚ್ಚೋದಿಲ್ಲ. ಮುಂದಿನ ಸಾರಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ, 500 ಅಲ್ಲ, 1000 ಕೋಟಿ ರೂ. ಕೊಡ್ತಾರೆ. ಇದಕ್ಕೆ ಜಿ.ಟಿ.ದೇವೇಗೌಡ ಯಾಕೆ ಹೀಗೆ ಮಾತನಾಡ್ತಿಯಾ ಅಂದ್ರು. ಅದಕ್ಕೆ ನಾನು ದೇವೇಗೌಡ, ಕುಮಾರಸ್ವಾಮಿ ಪಕ್ಷ ನಮ್ಮದು.   ಮುಂದಿನ ಬಾರಿ ರಾಜ್ಯದಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು'' ಎಂದು ಕೃಷ್ಣಪ್ಪ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor