ಕಾರ್ಕಳ| ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ; ಬದಲಿ ಸಂಚಾರ ವ್ಯವಸ್ಥೆ
Update: 2026-04-20 21:10 IST
ಉಡುಪಿ: ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ಎ.18ರಿಂದ 22ರವರೆಗೆ ರಥೋತ್ಸವ ನಡೆಯಲಿರುವುದರಿಂದ ಎ.22ರಂದು ಸಂಜೆ 4ಗಂಟೆಯಿಂದ ಮರುದಿನ ಬೆಳಗ್ಗೆ 6:00ಗಂಟೆಯವರೆಗೆ ಮೂರು ಮಾರ್ಗ ದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಪರ್ಯಾಯ ಸಂಚಾವರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಈ ಸಮಯದಲ್ಲಿ ಘನವಾಹನಗಳು ಬಂಗ್ಲೆಗುಡ್ಡೆ- ಹಿರಿಯಂಗಡಿ-ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್‌ಗಳು ತಾಲೂಕು ಜಂಕ್ಷನ್‌ನಿಂದ ಕಲ್ಲೊಟ್ಟೆ, ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸ ಬೇಕು.
ಸ್ಟೇಟ್‌ಬ್ಯಾಂಕ್- ಮೂರು ಮಾರ್ಗದಲ್ಲಿ ಸಂಚರಿಸುವ ಲಘು ವಾಹನ ಹಾಗೂ ದ್ವಿಚಕ್ರ ವಾಹನಗಳು ಸ್ಟೇಟ್‌ಬ್ಯಾಂಕ್ ಜಂಕ್ಷನ್‌ನಿಂದ ಗಾಂಧಿ ಮೈದಾನವಾಗಿ ಅಂಚೆಕಚೇರಿ, ಕಾಮಧೇನು ಹೊಟೇಲ್ ಜಂಕ್ಷನ್ ಮಾರ್ಗ ವಾಗಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.