ಸ್ವಾತಂತ್ರವಾಗಿ ಬದುಕಲು ಕಾನೂನು ಅರಿವು ಅಗತ್ಯ: ಎಸ್ಸೈ ಮುಕ್ತಾ
ಬ್ರಹ್ಮಾವರ, ಮೇ 24: ಇಂದಿನ ಸಮಾಜದಲ್ಲಿ ನಾವು ಸ್ವಾತಂತ್ರವಾಗಿ ಬದುಕಬೇಕೆಂದರೆ ಕಾನೂನು ಸುವ್ಯವಸ್ಥೆಗಳ ಕುರಿತು ಮಾಹಿತಿ ಎಲ್ಲರಿಗೂ ಅಗತ್ಯ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮುಕ್ತಾ ಬಾಯಿ ಹೇಳಿದ್ದಾರೆ.
ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಬ್ಯೂಟಿಪಾರ್ಲರ್ ಮತ್ತು ಕಂಪ್ಯೂಟರ್ ಡಿಟಿಪಿ ಶಿಬಿರಾರ್ಥಿಗಳಿಗೆ ಆಯೋಸಲಾದ ಕಾನೂನು ಅರಿವು ಕಾರ್ಯ ಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.
ಸೈಬರ್ ಕ್ರೈಮ್ ಬಗ್ಗೆ ವಾಟ್ಸಪ್ ಗ್ರೂಪ್‌ಗಳಿಗೆ ಪರಿಚಯಲ್ಲದವರಿಂದ ಗ್ರೂಪ್‌ಗೆ ಸೇರಿಸಿದರೆ ಗ್ರೂಪ್‌ನಿಂದ ಹೊರ ಬಂದು ಸುರಕ್ಷಿತವಾಗಿರಬೇಕು ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಸ್ನಾಪ್ ಚಾಟ್ ಗಳನ್ನು ತುಂಬಾ ಜಾಗರೂಕತೆುಂದ ಬಳಸಿ ಇದರಲ್ಲಿ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಅವರು ತಿಳಿಸಿದರು.
ಆತ್ಯಹತ್ಯೆಗೆ ಯುವ ಜನಾಂಗ ಆಲೋಚನೆ ಮಾಡದೇ ಸಹನೆಯಿಂದ ಯೋಚಿಸಿ ಬಾಳಬೇಕು. ಎಲ್ಲಾ ಸಮಸ್ಯೆ ಗಳಿಗೂ ಪರಿಹಾರ ಇದೆ. ಜೀವನ ಇರುವುದು ಒಂದು ಸಾರಿ ಹಾಗಾಗಿ ಉತ್ತಮ ರೀತಿಯಲ್ಲಿ ಬದುಕನ್ನು ಜೀವಿಸಿ ಎಂದು ಅವರು ಶುಭ ಹಾರೈಸಿದರು.
ಬ್ರಹ್ಮಾವರ ಠಾಣೆಯ ಪ್ರೊಬೆಷನರಿ ಉಪನಿರೀಕ್ಷಕಿ ಆಶ್ರೀತಾ ಸೈಬರ್ ಕ್ರೈಮ್ ಬಗ್ಗೆ ಮಾತನಾಡಿ, ಸೈಬರ್ ಕ್ರೈಮ್, ವಂಚನೆ ನಡೆದಾಗ ಸಹಾಯವಾಣಿ 1930 ದೂರು ದಾಖಲಿಸಬೇಕು. ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಎಪಿಕೆ ಪೈಲ್‌ನ್ನು ಕ್ಲಿಕ್ ಮಾಡದೇ ಅದರ ಬಗ್ಗೆ ಜಾಗರೂಕರಾಗಬೇಕು ಎಂದು ಎಚ್ಚರಿಸಿದರು.
ಬ್ರಹ್ಮಾವರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿಟ್ಟಲ್, ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ. ವಹಿಸಿದ್ದರು.
ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರಾ ಕೆ. ಕಾರ್ಯಕ್ರಮ ನಿರೂಪಿಸಿದರು. ಕಛೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯ ರವಿ ವಂದಿಸಿದರು.