×
Ad

ಕೋಡಿಬೆಂಗ್ರೆ ಸರಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ

Update: 2026-06-09 20:13 IST

ಉಡುಪಿ, ಜೂ.9: ಕೋಡಿಬೆಂಗ್ರೆ ವೆಲ್ಫೇರ್ ಟ್ರಸ್ಟ್ ವತಿಯಿಂದ ಕೋಡಿ ಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಕಾದೀರ್, ನಮ್ಮ ಟ್ರಸ್ಟ್ ಆರ್ಥಿಕವಾಗಿ ಹಿಂದುಳಿತ ವಿದ್ಯಾರ್ಥಿಗಳಿಗೆ ಸಹಾಯ, ಅನಾರೋಗ್ಯ ಪೀಡಿತರಿಗೆ ಸಹಾಯದಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ. ಶಾಲಾ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಇಂದು ನೋಟ್ ಪುಸ್ತಕ ಕೊಡುಗೆಯಾಗಿ ನೀಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕಲ್ಪನಾ, ಪದ್ಮಾ, ಎಸ್‌ಡಿಎಂ ಅಧ್ಯಕ್ಷೆ ರಿಯಾನ, ಉಪಾಧ್ಯಕ್ಷ ಗಣೇಶ್, ಕೋಡಿಬೆಂಗ್ರೆ ಜಾಮೀಯಾ ಮಸೀದಿ ಅಧ್ಯಕ್ಷ ಕೆ.ಅಬುಬಕ್ಕರ್ ಸಾಹೇಬ್, ಜಮಾಲ್ ಕೋಡಿಬೆಂಗ್ರೆ, ಯಾಸೀನ್ ಅಬೂಬಕ್ಕರ್, ರಮೇಶ್ ತಿಂಗಾಳಯ, ಝಕ್ರಿಯಾ ಬೆಂಗ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News