×
Ad

ಗೃಹ ಶುಶ್ರೂಷೆ ತರಬೇತಿಗೆ ಅರ್ಜಿ ಅಹ್ವಾನ

Update: 2026-06-10 21:35 IST

ಮಣಿಪಾಲ, ಜೂ.10: ಗ್ರಾಮೀಣ ಪ್ರದೇಶದ ಯುವತಿಯರಿಗೆ ಮೂರು ದಿನಗಳ (ಜೂ.29ರಿಂದ ಜುಲೈ 1ರವರೆಗೆ) ಗೃಹ ಶುಶ್ರೂಷೆ ಮತ್ತು ಆರೈಕೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಚಿತ ತರಬೇತಿಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಇದಕ್ಕಾಗಿ ಆಸಕ್ತ ಯುವತಿಯರಿಂದ ಆರ್ಜಿಗಳನ್ನು ಅಹ್ವಾನಿಸಲಾಗಿದೆ. ಯುವತಿಯರಿಗೆ ತಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತಮ್ಮ ಮನೆಯವರಿಗೆ ಹಾಗೂ ತಮ್ಮ ಸುತ್ತಮುತ್ತಲಿನವರಿಗೂ ಸೇವೆಯನ್ನು ನೀಡಲು ತರಬೇತಿ ಸಹಕಾರಿಯಾಗುತ್ತದೆ.

ತರಬೇತಿಗೆ ವಯೋಮಿತಿಯು 18ರಿಂದ 45 ವರ್ಷಗಳು. ವಿದ್ಯಾರ್ಹತೆ ಎಸೆಸೆಲ್ಸಿ ಮೇಲ್ಪಟ್ಟು ಇರಬೇಕು. ಅಭ್ಯರ್ಥಿ ಗಳು ಬಿವಿಟಿ ಕಚೇರಿಯ ದೂರವಾಣಿ: 0820-2570263/8970891031 ಮೂಲಕ ತಮ್ಮ ಹೆಸರನ್ನು ಜೂನ್ 24ರ ಒಳಗೆ ನೋಂದಾಯಿಸಿಕೊಳ್ಳಬಹುದು ಎಂದು ಬಿವಿಟಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News