ಶಿಶಿಕ್ಷು ತರಬೇತಿ : ಅರ್ಜಿ ಆಹ್ವಾನ

Update: 2026-08-14 21:24 IST

ಉಡುಪಿ, ಆ.14: ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಟ್ರೇನಿಂಗ್ ಸಂಸ್ಥೆ ಬೆಂಗಳೂರು ಇವರು ಫಿಟ್ಟರ್, ಟರ್ನರ್, ಮಶಿನಿಷ್ಟ, ಇಲೆಕ್ಟ್ರೀಶಿಯನ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್‌ಮೆಟಲ್ ವರ್ಕರ್, ಟೂಲ್ ಡೈ ಮೇಕರ್ ಸಿ.ಎನ್.ಸಿ ಪ್ರೊಗ್ರಾಮರ್ ಕಂ ಆಪರೇಟರ್, ಮೆಕ್ಯಾನಿಕ್ ರೆಫ್ರಿಜರೇಶನ್ ಏರ್ ಕಂಡಿಶನಿಂಗ್ ಟ್ರೇಡ್‌ಗಳಲ್ಲಿ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಅರ್ಹ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ಟ್ರೈನಿಂಗ್ (ಶಿಶಿಕ್ಷು ತರಬೇತಿ)ಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು - https://apprenticeshipindia.gov.in- ಪೋರ್ಟಲ್‌ನಲ್ಲಿ ನೋಂದಣಿ ಮಾಡಿ, ಅಪ್ರೆಂಟಿಸ್ ನೋಂದಣಿ ಸಂಖ್ಯೆ ಯೊಂದಿಗೆ ಉದ್ಯೋಗ ವಿನಿಮಯ ಕಛೇರಿಗೆ ಖುದ್ದಾಗಿ ಭೇಟಿ ನೀಡಿ, ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಭರ್ತಿ ಮಾಡಿ, ಸ್ವಧೃಢೀಕೃತ ಎಸೆಸೆಲ್ಸಿ ಅಂಕಪಟ್ಟಿ, ರಾಷ್ಟ್ರೀಯ ವೃತ್ತಿ ತರಬೇತಿ ಕೌನ್ಸಿಲ್‌ನಿಂದ ಅಂಗೀಕೃತ ವಾದ ಸಂಸ್ಥೆಯಿಂದ ಪಡೆದ ಐಟಿಐ, ಎನ್‌ಸಿವಿಟಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳು, ಜಾತಿ ಪ್ರಮಾಣಪತ್ರ, ಪಿ.ಎಚ್ ಪ್ರಮಾಣ ಪತ್ರ, ಸಶಸ್ತ್ರ ಸಿಬ್ಬಂದಿ ಪ್ರಮಾಣ ಪತ್ರದ ಪ್ರತಿ, ಆಧಾರ್‌ಕಾರ್ಡ್ ಹಾಗೂ ಪಾನ್‌ಕಾರ್ಡ್ ಪ್ರತಿ, ಆನ್‌ಲೈನ್ ಅಪ್ರೆಂಟಿಸ್ ನೋಂದಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್‌ಪೋರ್ಟ ಸೈಜ್ ಭಾವಚಿತ್ರಗಳೊಂದಿಗೆ ಆಗಸ್ಟ್ 27ರ ಒಳಗೆ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 0820-2574869ನ್ನು ಸಂಪರ್ಕಿಸ ಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ (ಪ್ರಭಾರ) ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News