ಕೊಲ್ಲೂರು, ಆ.27: ಜಡ್ಕಲ್ ಗ್ರಾಮದ ಬಿಸಿನ್ ಪಾರೆ ಎಂಬಲ್ಲಿ ಆ.26 ರಂದು ರಾತ್ರಿ ವೇಳೆ ಸರಣಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ.

ಜೀವನ ಕುಮಾರ ಶೆಟ್ಟಿ ಎಂಬವರ ಗ್ಯಾರೇಜಿನ ಶೇಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಡ್ರಾವರ್‌ನಲ್ಲಿ ಇಟ್ಟಿದ್ದ 9150ರೂ. ನಗದು ಹಣ, ಗ್ಲಾಂಡರ್ ಕಟಿಂಗ್ ಮಸಿನ್, ಟೂಲ್ಸ್ ಕಿಟ್, ಬೈಕ್ ಸಾಮಗ್ರಿ, ಟೂಲ್ಸ್ ಸಾಮಗ್ರಿ, 6 ಹೊಸ ಬೈಕ್ ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 46,800ರೂ. ಎಂದು ಅಂದಾಜಿಸಲಾಗಿದೆ.

ಕೆ.ಬಿ.ಜೋಸೆಫ್ ಎಂಬವರ ಗೂಡು ಅಂಗಡಿಯ ಬೀಗವನ್ನು ಮುರಿದು ಒಳಗಡೆ ಪ್ರವೇಶಿಸಿದ ಕಳ್ಳರು, ಅಂಗಡಿಯಲ್ಲಿದ್ದ 2000ರೂ. ಮೌಲ್ಯದ ತೂಕದ ಯಂತ್ರ ಹಾಗೂ 10,000ರೂ. ನಗದು ಕಳವು ಮಾಡಿದ್ದಾರೆ. ಅದೇ ರೀತಿ ನಾಗೇಂದ್ರ ಎಂಬವರು ಸೆಳ್ಕೋಡಿನ ಅಂಗಡಿಯ ಶೆಡ್ ಮುಂದೆ ನಿಲ್ಲಿಸಿದ 10,000ರೂ. ಮೌಲ್ಯದ ಬೈಕ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಹೀಗೆ ಮೂರು ಪ್ರಕರಣಗಳಲ್ಲಿ ಒಟ್ಟು ಸುಮಾರು 68,800/ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor