ಹಾವು ಕಡಿತದಿಂದ ವ್ಯಕ್ತಿ ಮೃತ್ಯು
ಕಾರ್ಕಳ, ನ.2: ವಿಷಕಾರಿ ಹಾವು ಕಡಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.1ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ನಿಟ್ಟೆ ಗ್ರಾಮದ ಮಹಾಬಲ ಚೌಟ(60) ಎಂದು ಗುರುತಿಸ ಲಾಗಿದೆ. ಇವರು ಮನೆಯ ಅಡಿಕೆ ತೋಟಕ್ಕೆ ನೀರು ಕಟ್ಟವಾಗ ವಿಷ ಕಾರಿ ಹಾವು ಕಾಲಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು, ಕಾರ್ಕಳ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.