ಎಸೆಸೆಲ್ಸಿ ಪರೀಕ್ಷೆ: ಉಡುಪಿ ಸರಕಾರಿ ಬಾಲಕಿಯರ ಪ.ಪೂ.ಕಾಲೇಜು, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Update: 2024-05-10 13:42 GMT

ಉಡುಪಿ, ಮೇ10: ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲಾ 128 ಮಂದಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಶೇ.100 ಫಲಿತಾಂಶ ದಾಖಲಾಗಿದೆ.

ತೇರ್ಗಡೆಗೊಂಡ ವಿದ್ಯಾರ್ಥಿನಿಯರಲ್ಲಿ 47 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 68 ಮಂದಿ ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣ ರಾಗಿದ್ದಾರೆ.27 ಮಂದಿ ಎ+ ಗ್ರೇಡ್ ಪಡೆದರೆ, 9 ಮಂದಿ ವಿದ್ಯಾರ್ಥಿನಿ ಯರು 600ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಸಂಸ್ಥೆಯ ಸಂಕೇತಾ ಎಚ್.ಎಸ್. ಅವರು 625ರಲ್ಲಿ 621 ಅಂಕಗಳಿಸುವ (ಶೇ.99.36) ರಾಜ್ಯದಲ್ಲಿ ಐದನೇ ಹಾಗೂ ಶಾಲೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ಸಿಂಧು ಪಿ.ಎಂ. 617(ಶೇ.98.72), ನಿಶ್ಮಿತಾ 614 (98.24), ಈಶ್ವರಿ 613 (98.08), ಅಲೀನಾ ಸಾವಿಯಾ ಅಂದ್ರಾದೆ 606 (96.96), ಸಾನ್ವಿ 604 (96.64), ಅದಿತಿ ರಾವ್ 602 (96.32), ನಿಥ್ವಿ 602 (96.32) ಹಾಗೂ ರಚನಾ ನಾಯಕ್ 601 (96.16) ಅಂಕ ಗಳಿಸಿದ್ದಾರೆ.

ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಬ್ರಹ್ಮಾವರ: ಸಾಸ್ತಾನದ ಸೈಂಟ್ ಆಂಟನಿ ಆಂಗ್ಲ ಮಾಧ್ಯಮ ಶಾಲೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತ 6ನೇ ವರ್ಷವೂ ಶೇ. 100 ಫಲಿತಾಂಶ ದಾಖಲಿಸಿದೆ.

ಈ ಬಾರಿ ಶಾಲೆಯಿಂದ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ ಒಟ್ಟು 39 ವಿದ್ಯಾರ್ಥಿಗಳಲ್ಲಿ 11 ಮಂದಿ ವಿಶಿಷ್ಠ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಿಂಚನಾ ಅವರು 605 (ಶೇ.96.80) ಅಂಕಗಳಿಸಿ ಶಾಲೆಗೆ ಅಗ್ರಸ್ಥಾನಿ ಯಾದರೆ, ಚೈತ್ರ ವಿ.ಪೂಜಾರಿ 600 (96), ಲಿಕ್ಸಿಟಾ ಅನ್ನಿ ಅಲ್ಮೇಡಾ 565 (90.40) ಹಾಗೂ ಪ್ರತೀಶಾ 564 (90.24) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಈ ಪ್ರೌಢ ಶಾಲೆ ಪ್ರಾರಂಭವಾಗಿ ಕೇವಲ 8 ವರ್ಷಗಳಲ್ಲಿ ಸತತ 6 ವರ್ಷ ಶೇ.100 ಫಲಿತಾಂಶವನ್ನು ಪಡೆದು ಹೆಮ್ಮೆಯ ಸಾಧನೆ ಮಾಡಿದೆ. ಈ ಸಾಧನೆಗಾಗಿ ಶಾಲೆಯ ವಿದ್ಯಾರ್ಥಿಗಳನ್ನು ಸಂಚಾಲಕ ವಂ. ಸುನೀಲ್ ಡಿಸಿಲ್ವ, ಮುಖ್ಯೋಪಾಧ್ಯಾ ಯಿನಿ ಅನಿತಾ ಆಲ್ಮೇಡಾ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News