ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ರಸ್ತೆ: ಕೇಂದ್ರ ಸಿಆರ್‌ಐಎಫ್ ನಿಧಿಯಿಂದ 119 ಕೋಟಿ ರೂ. ಬಿಡುಗಡೆ
ಉಡುಪಿ, ಜೂ.9: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು 18 ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ರಸ್ತೆಯ ದುರಸ್ತಿ ಮತ್ತು ಅಭಿವೃದ್ಧಿಗಾಗಿ ಮಂಜೂರಾಗಿದೆ ಎಂದು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರದ ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆಗೆ 6 ಕೋಟಿ ರೂ., ಉಡುಪಿ- ಹಿರಿಯಡ್ಕ -ಕಾರ್ಕಳ -ಸುಬ್ರಹ್ಮಣ್ಯ ರಸ್ತೆಗೆ 6 ಕೋಟಿ, ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ 5 ಕೋಟಿ, ಬಾರಕೂರು ರಸ್ತೆ ಅಭಿವೃದ್ಧಿಗೆ 10 ಕೋಟಿ, ಶಿರೂರು- ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ 3 ಕೋಟಿ, ಬ್ರಹ್ಮಾವರ ತಾಲೂಕಿನ ಹಳೆ ಎಂ.ಬಿ.ಸಿ ರಸ್ತೆಗೆ 1.60 ಕೋಟಿ ರೂ. ಮಂಜೂರಾಗಿದೆ.
ಉಳಿದಂತೆ ಆರೂರು-ಮುಣ್ಕಿನಜಡ್ಡು-ಕೊಕ್ಕರ್ಣೆ ರಸ್ತೆಗೆ 1.40 ಕೋಟಿ, ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ 2 ಕೋಟಿ, ಹೆಬ್ರಿ ತಾಲೂಕಿನ ಮುನಿಯಾಲು -ಕಬ್ಬಿನಾಲೆ ರಸ್ತೆಗೆ 1ಕೋಟಿ, ಅತ್ರಾಡಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ, ಕುಂಟಾಡಿ- ಹಳೆಕಟ್ಟೆ ಕೆಮ್ಮಣ್ಣು ಎಂಡಿಆರ್ ರಸ್ತೆಗೆ 1 ಕೋಟಿ, ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರೂ. ಮಂಜೂರಾತಿ ದೊರಕಿದೆ.
ಅಲ್ಲದೇ ಬಾಳೆಹೊನ್ನೂರು-ಶೃಂಗೇರಿ ರಸ್ತೆಗೆ 50 ಕೋಟಿ ರೂ., ಕೊಪ್ಪ- ಜಯಪುರ- ಶೃಂಗೇರಿ ರಸ್ತೆ 6 ಕೋಟಿ ರೂ., ಕಡೂರು ತಾಲೂಕಿನ ಬೇಗೂರು ಗೇಟ್‌ನಿಂದ -ಅರೇಹಳ್ಳಿ ಮೂಲಕ ಮಚ್ಚೆರಿ ರಸ್ತೆಗೆ 6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನ ಗಿರಿ- ಮುಳ್ಳಯ್ಯನಗಿರಿ ರಸ್ತೆಗೆ 6 ಕೋಟಿ ರೂ. ಮಂಜೂರಾಗಿದೆ.
ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್‌ನಿಂದ ಕಳಸ ರಸ್ತೆಗೆ 6 ಕೋಟಿ ಹಾಗೂ ತರಿಕೆರೆ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ 57 ಬಾಗಲಕೋಟೆ- ಬಿಳಿಗಿರಂಗನ ಬೆಟ್ಟ ರಸ್ತೆಯ ಅಭಿವೃದಿಗೆ 6 ಕೋಟಿ ರೂ. ಮಂಜೂರಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಕಾಮಗಾರಿ ಮಂಜೂರಾಗಲು ಕಾರಣರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಕೋಟ ಅವರ ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.