×
Ad

ಖರ್ಜೂರ ವ್ಯವಹಾರದ ಹೆಸರಿನಲ್ಲಿ 15.81ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2026-05-24 21:46 IST

ಉಡುಪಿ, ಮೇ 24: ಕತಾರ್‌ನಿಂದ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯವಹಾರ ಮಾಡುವ ಬಗ್ಗೆ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ 76 ಬಡಗುಬೆಟ್ಟು ಗ್ರಾಮದ ಇಫ್ರಾನ್ ಅಜೀಜ್(50) ಎಂಬವರಿಗೆ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಶರ್ಫುದ್ದೀನ್ ಎಂಬಾತ 2023ರ ಅಕ್ಟೋಬರ್‌ನಲ್ಲಿ ಕತಾರ್‌ನಿಂದ ಖರ್ಜೂರ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಭಾರತಕ್ಕೆ ಆಮದು ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವ ಪ್ರಸ್ತಾಪ ಮಾಡಿದ್ದರು. ಬಳಿಕ ಶರ್ಪುದ್ದೀನ್ ನಿರಂತರ ಫೋನ್ ಮೂಲಕ ಕರೆ ಮಾಡಿ, ವ್ಯಾಪಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಒತ್ತಾಯಿಸುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಾಲುದಾರರಾದ ಕೇರಳದ ಮುಹಮ್ಮದ್ ಶಾಹೀದ್ ಹಾಗೂ ತಮಿಳುನಾಡಿನ ಶಮೀಮ್ ಬಾನು ಅವರಿಗೆ ಹಣ ಪಾವತಿಸಿದರೆ ವಸ್ತುಗಳನ್ನು ಎರಡು ದಿನಗಳೊಳಗೆ ಉಡುಪಿಗೆ ಕಳುಹಿಸಿಕೊಡುವುದಾಗಿ ಹೇಳಿದ್ದರು. ಅದನ್ನು ನಂಬಿದ ಇರ್ಫಾನ್ 2025ರ ಜನವರಿಯಲ್ಲಿ ಒಟ್ಟು 15,81,000ರೂ. ಹಣವನ್ನು ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡಿದ್ದರು. ಅದರ ನಂತರ ಆರೋಪಿಗಳು ಖರ್ಜೂರ ಅಥವಾ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸದೇ ಇದ್ದು, ಫೋನ್ ಸ್ವೀಚ್ ಆಫ್ ಮಾಡಿ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News