ಡಿಕೆಎಸ್ಸಿ ಅಲ್ ಇಹ್ಸಾನ್ ಸನದುದಾನ- ಮಹಾಸಮ್ಮೇಳನ: 20 ಯುವ ವಿದ್ವಾಂಸರಿಗೆ ಇಹ್ಸಾನಿ ಪದವಿ ಪ್ರದಾನ

Update: 2024-05-04 17:11 GMT

ಕಾಪು, ಮೇ 4: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನ ಸಂಸ್ಥೆಯಾದ ಮರ್ಕಝ್ ತಅ್ಲೀಮಿಲ್ ಇಹ್ಸಾನ್ ಇದರ ಭಾಗವಾದ ಅಲ್ ಇಹ್ಸಾನ್ ದಅವಾ ಕಾಲೇಜಿನ 20 ಯುವ ವಿದ್ವಾಂಸರಿಗೆ ಪದವಿ ಪ್ರದಾನ ಮಾಡುವ ಘಟಿಕೋತ್ಸವ ಹಾಗೂ ಮಹಾಸಮ್ಮೇಳನದ ಸಮಾರೋಪ ಸಮಾರಂಭವು ಮೂಳೂರು ಮರ್ಕಝ್ ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು.

ಅಧ್ಯಕ್ಷತೆಯನ್ನು ಡಿಕೆಎಸ್ಸಿ ಕೇಂದ್ರ ಸಮಿತಿಯ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ವಹಿಸಿದ್ದರು. ಅಸ್ಸಯ್ಯಿದ್ ತ್ವಾಹಾ ಬಾಫಖಿ ತಂಙಳ್ ದುಆ ನೇರವೇರಿಸಿದರು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಿದರು. ಅಸ್ಸಯ್ಯಿದ್ ಅಲಿ ಬಾಪಖಿ ತಂಙಳ್ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು

ಮೌಲಾನಾ ಪೇರೋಡ್ ಅಬ್ದುಲ್ ರಹಿಮನ್ ಸಖಾಫಿ ಸನದುದಾನ ಭಾಷಣ ಮಾಡಿದರು. ಮರ್ಕಝ್ ನಾಲ್ಡೇಜ್ ಸಿಟಿಯ ನಿರ್ದೇಶಕ ಡಾ. ಅಬ್ದುಲ್ ಹಕೀಂ ಅಝ್ಹರಿ, ಜಾಮಿಯ ಸಅದಿಯ್ಯ ಅರೇಬಿಯ್ಯ ಸಹ ಪ್ರಾಂಶುಪಾಲ ಮುಹಮ್ಮದ್ ಅಲಿ ಸಖಾಫಿ ತೃಕರಿಪೂರ್, ಉಡುಪಿ ಜಿಲ್ಲಾ ನಾಯಿಬ್ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು ಅಬ್ದುರ್ರಶೀದ್ ಝೈನಿ ಕಕ್ಕಿಂಜೆ, ಬಿ.ಎಂ.ಫಾರೂಖ್ ಹಾಜಿ, ದಾವೂದ್ ಕಜೆಮಾರು ಶುಭ ಹಾರೈಸಿದರು.

ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಅಲ್ಹಾಜ್ ಮುಮ್ತಾಝ್ ಅಲಿ, ಹಮೀದ್ ಅದ್ದು ಮೂಳೂರು ಮುಖ್ಯ ಅತಿಥಿಗಳಾಗಿದ್ದರು. ಅಲ್ ಇಹ್ಸಾನ್ ದಅವಾ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಸ್ವಾಬಿರ್ ಸಅದಿ ಅಲ್ ಅಸ್ನವೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿದರು.

ವೇದಿಕೆಯಲ್ಲಿ ಮೂಳೂರು ಹಾಫಿಳ್ ಅಶ್ರಫ್ ಸಖಾಫಿ, ಅಬೂ ಸುಫ್ಯಾನ್ ಮದನಿ, ಅಶ್ರಫ್ ಸಖಾಫಿ ಕನ್ನಂಗಾರು, ಅಬೂಬಕ್ಕರ್ ನೇಜಾರು, ಎಸ್.ಕೆ. ಇಕ್ಬಾಲ್ ಕಟಪಾಡಿ, ಎ.ಎಚ್.ಅಬ್ದುಲ್ ಖಾದರ್, ಹಾತೀಂ ಕೂಳೂರು, ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಕೆ.ಕೆ.ಕಾಮಿಲ್ ಸಖಾಫಿ, ಕೆ.ಎಚ್.ರಫೀಕ್ ಸೂರಿಂಜೆ, ಸಯ್ಯಿದ್ ಹಾಮೀಮ್ ತಂಙಳ್, ಸಯ್ಯೀದ್ ಶಹೀದುದ್ದೀನ್ ತಂಙಳ್, ಸುಫ್ಯಾನ್ ಸುಖಾಫಿ ಮೂಡುಬಿದಿರೆ, ವೈ ಬಿ ಸಿ ಬಶೀರ್, ಎಂ ಎಚ್ ಬಿ ಮುಹಮ್ಮದ್, ಅಭಿಮಾನ್ ಹಾಜಬ್ಬ ಮೊದಲಾದ ನಾಯಕರು ಉಪಸ್ಥಿತರಿದ್ದರು. 

ಡಿಕೆಎಸ್ ಸಿ ಸಂಗಮ: ಡಿಕೆಎಸ್ ಸಿ ಸೆಂಟ್ರಲ್ ಕಮಿಟಿಯ ಕೋಶಾಧಿಕಾರಿ ಅಲ್ಹಾಜ್ ದಾವೂದು ಕಜೆಮಾರ್ ಅಧ್ಯಕ್ಷತೆಯಲ್ಲಿ ನಡೆದ ಡಿಕೆಎಸ್ ಸಿ ಸಂಗಮವನ್ನು ಡಿಕೆಎಸ್ ಸಿ ದುಬೈ ನ್ಯಾಶನಲ್ ಕಮಿಟಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ತ್ವಾಹ ಬಾಫಖೀಹ್ ತಂಙಳ್ ಉದ್ಘಾಟಿಸಿದರು.

ಡಿಕೆಎಸ್ಸಿ ಸೆಂಟ್ರಲ್ ಕಮಿಟಿಯ ಮಾಜಿ ಕಾರ್ಯಾಧ್ಯಕ್ಷ ಅಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಯುಎಇ ನ್ಯಾಶನಲ್ ಕಮಿಟಿ ಅಧ್ಯಕ್ಷ ಎಂ.ಇ.ಮುಹಮ್ಮದ್ ಮೂಳೂರು, ರಫೀಕ್ ಮಾಸ್ಟರ್ ಮಂಗಳೂರು ಶುಭ ಹಾರೈಸಿದರು. ಮೂಳೂರು ಮರ್ಕಝ್ ಸಮಿತಿಯ ಉಪಾಧ್ಯಕ್ಷ ಅಲ್ಹಾಜ್ ಇಸ್ಮಾಯಿಲ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನ ಕಾರ್ಯ ದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು.

ವೇದಿಕೆಯಲ್ಲಿ ಹುಸೈನ್ ಹಾಜಿ ಕಿನ್ಯಾ, ವೈ.ಅಹ್ಮದ್ ಹಾಜಿ ಉಚ್ಚಿಲ,. ಅನ್ವರ್ ಗೂಡಿನ ಬಳಿ, ಎನ್.ಎಸ್.ಅಬ್ದುಲ್ಲಾ, ಅಬ್ದುಲ್ ಹಮೀದ್ ಅರಮಿಕ್ಸ್,ಝಯಿನುದ್ದಿನ್ ಹಾಜಿ ಮುಕ್ವೆ,ಉಮರ್ ಹಾಜಿ ಮುಕ್ವೆ,ಇಸ್ಮಾಯಿಲ್ ಶಾಫಿ ಇಸಾಕ್ ಬೊಳ್ಳಯಿ ಬದ್ರುದ್ದೀನ್ ಹಾಜಿ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.








 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News