ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ವಿವಿ ರ‍್ಯಾಂಕಿಂಗ್: 2024ರಲ್ಲಿ 50 ಸ್ಥಾನ ಮೇಲಕ್ಕೆರಿದ ಮಣಿಪಾಲದ ಮಾಹೆ

Update: 2024-05-07 16:11 GMT

ಉಡುಪಿ, ಮೇ 7: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್‌ನ 2024ನೇ ಸಾಲಿನ ಏಷ್ಯಾ ಯೂನಿವರ್ಸಿಟಿ ರ‍್ಯಾಂಕಿಂಗ್ ನಲ್ಲಿ 201-250 ಶ್ರೇಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಮಾಹೆ ಒಟ್ಟಾರೆಯಾಗಿ 38.6-41.5 ಅಂಕಗಳನ್ನು ಸಂಗ್ರಹಿಸುವ ಮೂಲಕ ಕಳೆದ ಸಾಲಿನಲ್ಲಿ ಪಡೆದಿದ್ದ 251-300ರ ಶ್ರೇಣಿಯಿಂದ 50 ಸ್ಥಾನಗಳ ಗಮನಾರ್ಹ ಸುಧಾರಣೆಯನ್ನು ಸಾಧಿಸಿ 201-250ರ ಶ್ರೇಣಿಯಲ್ಲಿ ಸ್ಥಾನವನ್ನು ಪಡೆದಿದೆ.

ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟಿ ಶ್ರೇಯಾಂಕಗಳು 2024ನೇ ಸಾಲಿನ ಏಷ್ಯಾದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಲಕ್ಷಣಗಳನ್ನು ಪ್ರತಿಬಿಂಬಿಸಲು ಮರುಮಾಪನ ಮಾಡಲಾದ 18 ಕಾರ್ಯಕ್ಷಮತೆ ಸೂಚಕ ಗಳನ್ನು ಬಳಸುತ್ತದೆ. ಇದಕ್ಕಾಗಿ ವಿಶ್ವವಿದ್ಯಾನಿಲಯಗಳನ್ನು ಅವುಗಳ ಎಲ್ಲಾ ಪ್ರಮುಖ ಮೂಲ ಕಾರ್ಯಗಳಲ್ಲಿ- ಬೋಧನೆ, ಸಂಶೋಧನೆ, ಜ್ಞಾನ ವರ್ಗಾವಣೆ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನಗಳಲ್ಲಿ- ನಿರ್ಣಯಿಸಲಾಗುತ್ತದೆ.

ಸಂಸ್ಥೆಯ ಕಾರ್ಯಕ್ಷಮತೆಯ ಸೂಚಕಗಳನ್ನು ಐದು ಕ್ಷೇತ್ರಗಳಾಗಿ ವರ್ಗೀಕರಿ ಸಲಾಗಿದೆ: ಬೋಧನೆ (ಕಲಿಕೆ ಪರಿಸರ); ಸಂಶೋಧನಾ ಪರಿಸರ (ಪರಿಮಾಣ, ಆದಾಯ ಮತ್ತು ಖ್ಯಾತಿ); ಸಂಶೋಧನಾ ಗುಣಮಟ್ಟ (ಉಲ್ಲೇಖದ ಪ್ರಭಾವ, ಸಂಶೋಧನಾ ಸಾಮರ್ಥ್ಯ, ಸಂಶೋಧನೆಯ ಶ್ರೇಷ್ಠತೆ ಮತ್ತು ಸಂಶೋಧನಾ ಪ್ರಭಾವ); ಅಂತಾರಾಷ್ಟ್ರೀಯ ದೃಷ್ಟಿಕೋನ (ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಂಶೋಧನೆ); ಮತ್ತು ಉದ್ಯಮ (ಆದಾಯ ಮತ್ತು ಪೇಟೆಂಟ್).

ಈ ಬಾರಿಯ ವಿವಿ ರ್ಯಾಂಕಿಂಗ್‌ಗಾಗಿ 31 ಪ್ರಾಂತ್ಯಗಳಿಂದ ಒಟ್ಟು 739 ವಿದ್ಯಾಸಂಸ್ಥೆಗಳು ಭಾಗವಹಿಸಿದ್ದವು. ಇವುಗಳಲ್ಲಿ ಜಪಾನ್ ಮತ್ತು ಭಾರತ ದಿಂದ ಅತೀ ಹೆಚ್ಚು 119 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದವು. ಕಳೆದ ವರ್ಷಕ್ಕಿಂತ 98 ಹೆಚ್ಚುವರಿ ವಿವಿಗಳು ಭಾರತ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನಗಳಿಂದ ಭಾಗವಹಿಸಿದ್ದವು.

ಮಾಹೆಯ ಈ ಬಾರಿ ಅತ್ಯುತ್ತಮ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕುಲಪತಿ ಲೆ. ಜ. (ಡಾ.)ಎಂ.ಡಿ.ವೆಂಕಟೇಶ್, ಟೈಮ್ಸ್ ಹೈಯರ್ ಎಜುಕೇಶನ್‌ನಿಂದ ಉತ್ತಮ ಶ್ರೇಯಾಂಕ ಪಡೆದಿರುವು ದಕ್ಕೆ ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯಿದೆ. ಸಂಶೋಧನೆ, ನಾವೀನ್ಯತೆಗಳನ್ನು ಉತ್ತೇಜಿಸುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ ಮತ್ತು ಈ ಗಮನಾರ್ಹ ಸಾಧನೆಗಾಗಿ ಶ್ರಮಿಸಿದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಬದ್ಧತೆಯನ್ನು ಇದು ಪ್ರತಿಫಲಿಸುತ್ತದೆ. ಅವರ ಕಠಿಣ ಪರಿಶ್ರಮ ಮತ್ತು ಸಾಧನೆಗಳಿಗಾಗಿ ನಾನು ಇಡೀ ಮಾಹೆ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಈ ಬಾರಿ ಉನ್ನತ ಸ್ಥಾನ ಪಡೆದಿರುವುದರಿಂದ ನಾವು ರೋಮಾಂಚನಗೊಂಡಿದ್ದೇವೆ. ನಾವು ಯಾವಾ ಗಲೂ ಸರ್ವಶ್ರೇಷ್ಠ ಕಾರ್ಯಕ್ಷಮತೆಗಾಗಿ ಶ್ರಮಿಸುತ್ತೇವೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸ್ಥಾನವನ್ನು ಹಿಡಿದಿಟ್ಟುಕೊಳ್ಳುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News