ಮೇ 3-6: ಕಾರವಾರ-ಮೈಸೂರು ನಡುವೆ ಬೇಸಿಗೆ ವಿಶೇಷ ರೈಲು

Update: 2024-05-02 14:26 GMT

ಫೈಲ್‌ ಫೋಟೊ 

ಉಡುಪಿ, ಮೇ 2: ಪ್ರಯಾಣಿಕರ ವಿಶೇಷ ಬೇಡಿಕೆಯ ಹಿನ್ನೆಲೆಯಲ್ಲಿ ದಕ್ಷಿಣ -ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಕೊಂಕಣ ರೈಲು ಮಾರ್ಗದಲ್ಲಿ ಮೈಸೂರು ಜಂಕ್ಷನ್ ಹಾಗೂ ಕಾರವಾರ ನಡುವೆ ವನ್‌ವೇ ಬೇಸಿಗೆಯ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ.06241 ಮೈಸೂರು ಜಂಕ್ಷನ್-ಕಾರವಾರ ವನ್‌ವೇ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 3 ಶುಕ್ರವಾರ ಹಾಗೂ ಮೇ 6 ಸೋಮವಾರ ರಾತ್ರಿ 8:15ಕ್ಕೆ ಮೈಸೂರು ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಅಪರಾಹ್ನ 1 ಗಂಟೆಗೆ ಕಾರವಾರ ತಲುಪಲಿದೆ.

ಈ ರೈಲಿಗೆ ಮಂಡ್ಯ, ಕಂಗೇರಿ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್, ಯಶವಂತಪುರ, ನೆಲಮಂಗಲ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಕುಮಟ ಹಾಗೂ ಗೋಕರ್ಣ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಅದೇ ರೀತಿ ರೈಲು ನಂ.0642 ಕಾರವಾರ-ಮೈಸೂರು ಜಂಕ್ಷನ್ ವನ್‌ವೇ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 4 ಶನಿವಾರ ಹಾಗೂ ಮೇ 7 ಮಂಗಳವಾರ ರಾತ್ರಿ 10 ಕ್ಕೆ ಕಾರವಾರ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಸಂಜೆ 6:25ಗಂಟೆಗೆ ಮೈಸೂರು ಜಂಕ್ಷನ್ ತಲುಪಲಿದೆ.

ಈ ರೈಲಿಗೆ ಗೋಕರ್ಣ ರೋಡ್, ಕುಮಟ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.

ಈ ರೈಲು ಒಂದು 2ಟಯರ್ ಎಸಿ ಕೋಚ್, ಎರಡು ೩ಟಯರ್ ಎಸಿ ಕೋಚ್, ೮ ಸ್ಲೀಪರ್ ಕೋಚ್ ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ. ರೈಲಿನ ವೇಳಾಪಟ್ಟಿ ಹಾಗೂ ಇತರ ಮಾಹಿತಿಗಳಿಗಾಗಿ ವೆಬ್‌ಸೈಟ್ - www.enquiry.indianrail.gov.in-ನ್ನು ಅಥವಾ ಎನ್‌ಟಿಇಎಸ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಸೀಟು ಬುಕ್ಕಿಂಗ್ ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲಿ ಮೇ 3ರಿಂದ ಪ್ರಾರಂಭಗೊಳ್ಳಲಿದೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News