×
Ad

ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 15 ಮಂದಿ ಆಯ್ಕೆ

Update: 2025-09-04 19:47 IST

ಉಡುಪಿ, ಸೆ.4: ಶಿಕ್ಷಕರ ದಿನಾಚರಣೆ ಪ್ರಯುಕ್ತ 2025-26ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಒಟ್ಟು 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ ಐವರು ಶಿಕ್ಷಕರನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ. ವಿವರ ಹೀಗಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: 1.ಸರಸ್ವತಿ, ಸಹ ಶಿಕ್ಷಕಿ ಮರೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂದಾಪುರ ತಾಲೂಕು, 2.ವಸುಂಧರ, ಸಹ ಶಿಕ್ಷಕಿ ಬೊಮ್ಮಾರಬೆಟ್ಟು ಗುಡ್ಡೆಯಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ತಾಲೂಕು, 3.ಹರೀಶ್ ಪೂಜಾರಿ ಎಸ್., ಸಹ ಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಕಾರ್ಕಳ ತಾಲೂಕು, 4.ಸುಮಂಗಲಾ ಗಾಣಿ, ಸಹ ಶಿಕ್ಷಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿಸ್ಮತಿ ಬೈಂದೂರು ವಲಯ ಹಾಗೂ 5.ವಿಜಯಾ ಎ.,ಸಹ ಶಿಕ್ಷಕಿ ಮೂಡುಕೆರೆ- ಅಚ್ಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರ ತಾಲೂಕು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: 1.ಶೇಖರ ಕುಮಾರ, ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕತ್ತೂರು ಕುಂದಾಪುರ ತಾಲೂಕು, 2.ವೀಣಾ, ಸಹ ಶಿಕ್ಷಕಿ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ತಾಲೂಕು, 3. ರಮಣಿ, ಮುಖ್ಯ ಶಿಕ್ಷಕಿ ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ತಾಲೂಕು, 4. ತಿಮ್ಮಪ್ಪ ಗಾಣಿಗ, ಮುಖ್ಯ ಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನು ಬೈಂದೂರು ವಲಯ, 5. ಎಚ್.ಪ್ರಭಾವತಿ, ಮುಖ್ಯ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು-ಮಾಳ ಕಾರ್ಕಳ ತಾಲೂಕು.

ಪ್ರೌಢಶಾಲಾ ವಿಭಾಗ: 1. ಶಶಿಶಂಕರ್ ಎಚ್.ಎಂ., ಸಹ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬಜಗೋಳಿ ಕಾರ್ಕಳ ತಾಲೂಕು, 2.ಎ.ನಟರಾಜ ಉಪಾಧ್ಯ, ಚಿತ್ರಕಲಾ ಶಿಕ್ಷಕರು ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇನ್ನಂಜೆ ಉಡುಪಿ ತಾಲೂಕು, 3.ಜಗದೀಶ್ ಕೆ., ದೈಹಿಕ ಶಿಕ್ಷಣ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ಬ್ರಹ್ಮಾವರ ತಾಲೂಕು, 4. ಸಂತೋಷ್, ಸಹ ಶಿಕ್ಷಕರು ರಾಮ್ಸನ್ ಸರಕಾರಿ ಪ್ರೌಢ ಶಾಲೆ ಕಂಡ್ಲೂರು ಕುಂದಾಪುರ ತಾಲೂಕು, 5.ಜಗದೀಶ್ ಶೆಟ್ಟಿ, ಸಹ ಶಿಕ್ಷಕರು ಹೆಮ್ಮಾಡಿ ಜನತಾ ಪ್ರೌಢಶಾಲೆ ಬೈಂದೂರು ವಲಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News