×
Ad

ಉಡುಪಿ: ಶೇ.79.91ರಷ್ಟು ಮನೆಗಳ ಸಮೀಕ್ಷೆ ಪೂರ್ಣ

Update: 2025-10-11 21:45 IST

ಸಾಂದರ್ಭಿಕ ಚಿತ್ರ

ಉಡುಪಿ: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ಗಣತಿಯಲ್ಲಿ ಶನಿವಾರದ ಕೊನೆಗೆ ಉಡುಪಿ ಜಿಲ್ಲೆಯಲ್ಲಿ ಶೇ.79.91ರಷ್ಟು ಮನೆಗಳ ಸಮೀಕ್ಷೆ ಪೂರ್ಣ ಗೊಂಡಿದೆ. ಇಂದು ಸಂಜೆಯವರೆಗೆ ರಾಜ್ಯದಲ್ಲಿ ಶೇ.87.57ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುವ ಮಾಹಿತಿ ಇದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯ ಬೇಕಾಗಿದ್ದು, ಇಂದು ಸಂಜೆಯವರೆಗೆ ಒಟ್ಟು 2,49,065 ಮನೆಗಳ ಗಣತಿ ಯನ್ನು ಮುಗಿಸಲಾಗಿದೆ. ಇಂದು ಒಟ್ಟು 3,480 ಮನೆಗಳ ಜನರ ಗಣತಿಯನ್ನು ಸಮೀಕ್ಷೆಗಾರರು ಮಾಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40,291 ಮನೆಗಳ ಯುಎಚ್‌ಐಡಿ (ಪ್ರತಿ ಮನೆಗಳಿಗೆ ನೀಡುವ ವಿಶಿಷ್ಟ ಗುರುತು)ಯನ್ನು ಮನೆಯಲ್ಲಿ ಯಾರೂ ಇಲ್ಲದ ಹಾಗೂ ಇತರೆ ಕಾರಣಗಳಿಗಾಗಿ ಕೊನೆಗೊಳಿಸಲಾಗಿದೆ.

ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳ ಗಣತಿ ಶೇ.80ನ್ನು ದಾಟಿದೆ. ಬೈಂದೂರಿನಲ್ಲಿ 26,623 ಮನೆಗಳ ಗುರಿಯಲ್ಲಿ 24,406 ಮನೆಗಳ ಗಣತಿ ಮುಗಿದಿದ್ದು, ಶೇ.103 ಸಾಧನೆಯಾಗಿದೆ. ಇಲ್ಲಿ 3076 ಮನೆಗಳ ಯುಎಚ್‌ಐಡಿ ಮುಚ್ಚಿದೆ. ಅದೇ ರೀತಿ ಹೆಬ್ರಿಯಲ್ಲಿ ಗುರಿಯಾದ 13,422 ಮನೆಗಳಲ್ಲಿ 11,390 ಮನೆಗಳ ಸಮೀಕ್ಷೆ ಮುಗಿದಿದ್ದು ಶೇ.102.12 ಸಾಧನೆ ದಾಖಲಾಗಿದೆ. ಇಲ್ಲೂ 2317 ಮನೆಗಳ ಯುಎಚ್‌ಐಡಿ ಮುಚ್ಚಿದೆ.

ಜಿಲ್ಲೆಯಲ್ಲಿ ಉಡುಪಿ ತಾಲೂಕು ಈಗಲೂ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಶೇ.76.74 ಸಮೀಕ್ಷೆಯಷ್ಟೇ ಮುಗಿದಿದೆ. ಬ್ರಹ್ಮಾವರದಲ್ಲಿ ಶೇ.90, ಕುಂದಾಪುರದಲ್ಲಿ ಶೇ.89, ಕಾರ್ಕಳದಲ್ಲಿ ಶೇ.77 ಹಾಗೂ ಕಾಪುವಿನಲ್ಲಿ ಶೇ.74ರಷ್ಟು ಸಮೀಕ್ಷೆ ಮುಕ್ತಾಯಗೊಂಡಿದೆ.

ಜಿಲ್ಲೆಯಲ್ಲಿ ಪ್ರತಿದಿನದ ಗುರಿ 30,139 ಮನೆಗಳಾಗಿವೆ. ವಿವಿಧ ಕಾರಣ ಗಳಿಂದ ನಿಗದಿತ ದಿನದೊಳಗೆ ಗಣತಿ ಮುಗಿಯಲು ಇಂದು 2,06,687 ಮನೆಗಳ ಗಣತಿ ನಡೆಯಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News