×
Ad

ಶೇ.88ರಷ್ಟು ಮನೆಗಳ ಸಮೀಕ್ಷೆ ಪೂರ್ಣ : ಕುಂಟುತ್ತಾ ಸಾಗಿರುವ ಉಡುಪಿ ತಾಲೂಕು ಗಣತಿ

Update: 2025-10-13 20:20 IST

ಸಾಂದರ್ಭಿಕ ಚಿತ್ರ

ಉಡುಪಿ : ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಸ್ತರಿತ ಗಣತಿಯಲ್ಲಿ ಸೋಮವಾರ ಸಂಜೆಯವರೆಗೆ ಉಡುಪಿ ಜಿಲ್ಲೆಯಲ್ಲಿ ಶೇ.87.93ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇದೇ ವೇಳೆ ರಾಜ್ಯದಲ್ಲಿ ಶೇ.90.23ರಷ್ಟು ಸಮೀಕ್ಷೆ ಪೂರ್ಣಗೊಂಡಿರುವ ಮಾಹಿತಿ ಇದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,62,093 ಮನೆಗಳ ಗಣತಿ ನಡೆಯಬೇಕಾಗಿದ್ದು, ಇಂದು ಸಂಜೆಯವರೆಗೆ ಒಟ್ಟು 2,54,463 ಮನೆಗಳ ಗಣತಿಯನ್ನು ಮುಗಿಸಲಾಗಿದೆ. ಇಂದು ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 2,786 ಮನೆಗಳ ಜನರ ಗಣತಿಯನ್ನು ಸಮೀಕ್ಷೆಗಾರರು ಮುಗಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 63,923 ಮನೆಗಳ ಯುಎಚ್‌ಐಡಿ (ಪ್ರತಿ ಮನೆಗೆ ನೀಡುವ ವಿಶಿಷ್ಟ ಗುರುತು)ಯನ್ನು ಮನೆಯಲ್ಲಿ ಯಾರೂ ಇಲ್ಲದ ಹಾಗೂ ಇತರೆ ಕಾರಣಗಳಿಗಾಗಿ ಕೊನೆಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಉಡುಪಿಯನ್ನು ಹೊರತು ಪಡಿಸಿ ಉಳಿದೆಲ್ಲಾ ತಾಲೂಕುಗಳ ಗಣತಿ ಶೇ.80ನ್ನು ದಾಟಿದೆ. ಜಿಲ್ಲೆಗೆ ಹೋಲಿಸಿದರೆ ಉಡುಪಿ ತಾಲೂಕಿನ ಸರ್ವೆ ಕುಂಟುತ್ತಾ ಸಾಗಿದ್ದು, ಈವರೆಗೆ ಶೇ.74.36ರಷ್ಟು ಮಾತ್ರ ಸರ್ವೆ ಕಾರ್ಯ ಮುಗಿಸಲಾಗಿದೆ. ಇದಲ್ಲದೇ ಜಿಲ್ಲೆಯಲ್ಲೇ ಅತ್ಯಧಿಕ 21,620 ಮನೆಗಳ ಯುಎಚ್‌ಐಡಿಯನ್ನು ಮುಕ್ತಾಯಗೊಳಿಸಲಾಗಿದೆ.

ಉಳಿದಂತೆ ಬೈಂದೂರಿನಲ್ಲಿ 26,623 ಮನೆಗಳ ಗುರಿಯಲ್ಲಿ 25,111 ಮನೆಗಳ ಗಣತಿ ಮುಗಿದಿದ್ದು, ಶೇ.108 ಸಾಧನೆಯಾಗಿದೆ. ಇಲ್ಲಿ 3084 ಮನೆಗಳ ಯುಎಚ್‌ಐಡಿ ಮುಚ್ಚಿದೆ. ಅದೇ ರೀತಿ ಹೆಬ್ರಿಯಲ್ಲಿ ಗುರಿಯಾದ 13,422 ಮನೆಗಳಲ್ಲಿ 11,585 ಮನೆಗಳ ಸಮೀಕ್ಷೆ ಮುಗಿದಿದ್ದು, ಶೇ.105.23 ಸಾಧನೆ ದಾಖಲಾಗಿದೆ. ಇಲ್ಲೂ 2,539 ಮನೆಗಳ ಯುಎಚ್‌ಐಡಿ ಮುಚ್ಚಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಶೇ.97, ಕುಂದಾಪುರದಲ್ಲಿ ಶೇ.95, ಕಾರ್ಕಳದಲ್ಲಿ ಶೇ.85 ಹಾಗೂ ಕಾಪುವಿನಲ್ಲಿ ಶೇ.81ರಷ್ಟು ಸಮೀಕ್ಷೆ ಮುಕ್ತಾಯಗೊಂಡಿದೆ. ಸಮೀಕ್ಷೆಗೆ ಅ.18 ಕೊನೆಯ ದಿನವಾಗಿದೆ.

ಸೋಮವಾರ ಸಂಜೆಯವರೆಗೆ ತಾಲೂಕುವಾರು ನಡೆದ ಸಮೀಕ್ಷೆಯ ಸಂಪೂರ್ಣ ವಿವರ ಹೀಗಿದೆ. (ತಾಲೂಕು, ಒಟ್ಟು ಕುಟುಂಬಗಳು, ಬ್ಲಾಕ್‌ಗಳು, ಇಂದು ಪೂರ್ಣಗೊಂಡ ಮನೆ, ಸಮೀಕ್ಷೆ ಪೂರ್ಣಗೊಂಡ ಮನೆ, ಯುಎಚ್‌ಐಡಿ ಕ್ಲೋಸ್, ಶೇಕಡಾವಾರು)

ಬೈಂದೂರು 26,623  246   0373   25,111   3784    108.53

ಹೆಬ್ರಿ            13,422  121   0115    11,585   2539    105.23

ಬ್ರಹ್ಮಾವರ   51,775   465  0093    40,272   9966     97.03

ಕುಂದಾಪುರ 66,678   621  0434    52,797   11,117  95.85

ಕಾರ್ಕಳ       58,634    531  0253   41,726    8,169    85.10

ಕಾಪು           46,286    403   0267   31,213    6,728    81.97

ಉಡುಪಿ       98,675    844   1251   51,759   21,620  74.36

ಒಟ್ಟು          362093   3231  2786  254463  63,923  87.93

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News