ಉಡುಪಿ: ಅಂತಾರಾಷ್ಟ್ರೀಯ ಅಂತರಿಕ್ಷ ಸಪ್ತಾಹ ಆಚರಣೆ
ಉಡುಪಿ: ಉಡುಪಿ ಪೂರ್ಣಪ್ರಜ್ಞ ಅಮೆಚ್ಯೂರ್ ಆಸ್ಟ್ರೋನಮರಸ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಆಂತರಿಕ್ಷ ಸಪ್ತಾಹವನ್ನು ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಅ.6ರಂದು ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಶೈಕ್ಷಣಿಕ ಮತ್ತು ತಾಂತ್ರಿಕ ಚಟುವಟಿಕೆಗಳ ನಿರ್ದೇಶಕ ಡಾ.ಮಂಜುನಾಥ್ ಉದ್ಘಾಟಿಸಿ, ಭವಿಷ್ಯದಲ್ಲಿ ಅಂತರಿಕ್ಷ ಪ್ರಯಾಣ ಮತ್ತು ಪ್ರವಾಸೋದ್ಯಮವು ಅತ್ಯಂತ ಮಹತ್ವವನ್ನು ಪಡೆಯಲಿದೆ. ಆದ್ದರಿಂದ ಯುವಜನತೆ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಸಪ್ತಾಹದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿದರು. ವಿವಿಧ ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲದ ಎಂಸಿಎನ್ಎಸ್ನ ದಿನೇಶ್ ಹೆಬ್ಬಾರ್, ಮಣಿಪಾಲ ಎಂಐಟಿಯ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ವ್ಯಾಸ ಉಪಾಧ್ಯಾಯ ವಿಚಾರಗೋಷ್ಟಿಗಳನ್ನು ನಡೆಸಿಕೊಟ್ಟರು. ಅ.೧೦ ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.