ಕಾರ್ಕಳ | ಡಿ.9ರಂದು ನಾಡು ನುಡಿ ಚಿಂತನೆ -ಸಂವಾದ ಕಾರ್ಯಕ್ರಮ
Update: 2025-12-07 20:53 IST
ಕಾರ್ಕಳ, ಡಿ.7: ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮತ್ತು ಸಾಹಿತ್ಯ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯುಕ್ತ ಆಶ್ರಯದಲ್ಲಿ ನಾಡು ನುಡಿ ಚಿಂತನೆ ಮತ್ತು ಸಂವಾದ, ‘ಕನ್ನಡ ಭಾವಗಾಯನ ಕಾರ್ಯಕ್ರಮ ಡಿ.9ರಂದು ಮಧ್ಯಾಹ್ನ 2ಗಂಟೆಗೆ ಕಾಲೇಜಿನ ಎ.ವಿ.ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.