×
Ad

ಲೋಕಸಭಾ ಚುನಾವಣೆ: ಮರವಂತೆ ಮತಗಟ್ಟೆಯಲ್ಲಿ ಶೇ.26 ಮತದಾನ

Update: 2024-05-07 11:29 IST

ಬೈಂದೂರು, ಮೇ 7: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆಯ ಮತಗಟ್ಟೆ ಯೊಂದರಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಶೇ.26ರಷ್ಟು ಮತದಾನವಾಗಿದೆ.

ಮಯದಾನ ಶಾಂತಿಯುತವಾಗಿ ಸಾಗಿದ್ದು, ಮತದಾರರು ಬೆಳಗ್ಗಿನಿಂದ ಗುಂಪುಗುಂಪಾಗಿ ಬಂದು ಉತ್ಸಾಹದಿಂದ ಮತ ಚಲಾಯಿಸುತಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.

ಈ ಮತಗಟ್ಟೆಯಲ್ಲಿ 1164 ಮತದಾರರಿದ್ದು ಈವವರೆಗೆ 192 ಪುರುಷರು ಹಾಗೂ 116 ಮಂದಿ ಸೇರಿ ಒಟ್ಟು 308 ಮತದಾರರು ಮತ ಚಲಾಯಿಸಿದ್ದಾರೆ ಎಂದರು.

ಹಿರಿಯ ನಾಗರಿಕರು ಬೇರೊಬ್ಬರ ನೆರವಿನಿಂದ ಬಂದು ಮತ ಹಾಕಿದರೆ, ಮರವಂತೆಯ ವಿಕಲಚೇತನ ಮತದಾರೆ ಛಾಯಾದೇವಿ ಗ್ರಾಮ ಪಂಚಾಯತ್ ನಿಂದ ಒದಗಿಸಲಾದ ವೀಲ್ ಚೇರ್ ನಲ್ಲಿ ಆಗಮಿಸಿ ಮತ ಚಲಾಯಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News