ಹಬ್ಬಗಳನ್ನು ಪರಸ್ಪರರು ಒಂದುಗೂಡಿ ಆಚರಿಸಬೇಕು: ಸಂತ ಅನ್ನಮ್ಮ ಚರ್ಚ್ ಧರ್ಮಗುರು ಡೇನಿಸ್ ಡೇಸ

Update: 2024-04-18 18:17 GMT

ಮಲ್ಪೆ: ಹಬ್ಬಗಳನ್ನು ಪರಸ್ಪರರು ಒಂದುಗೂಡಿ ಆಚರಿಸಬೇಕು ಆಗ ಸದೃಢ ಶಾಂತಿಯುತ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯ ಎಂದು ಸಂತ ಅನ್ನಮ್ಮ ಚರ್ಚ್ ಇದರ ಧರ್ಮ ಗುರು ಆಗಿರುವ ಡೇನಿಸ್ ಡೇಸ ಅವರು ಅಭಿಪ್ರಾಯ ಪಟ್ಟರು.‌

ಅವರು ಇತ್ತೀಚಿಗೆ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆ ವತಿಯಿಂದ ಆಯೋಜಿಸಿದ ಈದ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ರಮೇಶ್ ತಿಂಗಳಾಯ ರವರು ಮಾತಾಡುತ್ತಾ ನಮ್ಮ ಹಿರಿಯರು ಒಟ್ಟುಗೂಡಿ ಕಟ್ಟಿದಂತಹ ಸರ್ವಧರ್ಮ ಸಮಾಜ ಮುಂದಿನ ಪೀಳಿಗೆಗೂ ತಿಳಿಯಪಡಿಸುವ ಅವಶ್ಯಕತೆ ಇದೆ ಮತ್ತು ಆ ಕಾರ್ಯ ನಮ್ಮ ಮನೆಯಿಂದಲೇ ನಡೆಯಲಿ ಎಂದು ಹೇಳಿದರು.

ಮೌಲಾನಾ ಇಮ್ರಾನುಲ್ಲಾ ಖಾನ್ ರವರು ನಾವೆಲ್ಲರೂ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಬೇಕೆ ಹೊರತು ಧಾರ್ಮಿಕವಾದ ಅಲ್ಲ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಸ್ತಾವಿಕ ಮತ್ತು ನಿರೂಪಣೆ ಜಿ ಶುಐಬ್ ಮಲ್ಪೆ ನಿರ್ವಹಿಸಿದರು, ಆರಂಭದಲ್ಲಿ ಅಯಾನ್ ಶೇಕ್ ಮಲ್ಪೆ ಕುರ್'ಆನ್ ಪಠಣ ಮಾಡಿದರು.

ಸುಮಾರು 90 ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ 65 ಕ್ಕಿಂತಲೂ ಹೆಚ್ಚು ದೇಶ ಬಾಂಧವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News