ಉಡುಪಿ: ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Update: 2024-04-19 15:00 GMT

ಉಡುಪಿ, ಎ.19: ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಉಪ್ಪೂರಿನ ರಾಮಕ್ಷತ್ರಿಯ ಸಭಾಭವನದಲ್ಲಿ ಇಂದು ನಡೆದ ಉಡುಪಿ ವಿಧಾನ ಸಭಾ ಕ್ಷೇತ್ರ ವ್ತಾಪ್ತಿಯ ನಾರಿ ಶಕ್ತಿ ಸಮಾವೇಶದಲ್ಲಿ ಭಾಗವಹಿಸಲು ದೂರದ ಹೊಸದಿಲ್ಲಿಯಿಂದ ಆಗಮಿಸಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹಾಗೂ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸನ್ನಿವೇಶ ಸೃಷ್ಟಿಯಾಯಿತು.

ಉಡುಪಿ ಹೊರವಲಯದ, ಗ್ರಾಮಾಂತರ ಪ್ರದೇಶವಾದ ಉಪ್ಪೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ರಾಮಕ್ಷತ್ರಿಯ ಸಭಾಭವನದಲ್ಲಿ ಆಯೋಜಿಸಲಾದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು 10 ಗಂಟೆಗಾಗಲೇ ಮಹಿಳೆಯರನ್ನು ಕರೆತರಲಾಗಿತ್ತು. ಕಾರ್ಯಕ್ರಮ 11ರಿಂದ 12:30ರವರೆಗೆ ನಿಗದಿಯಾಗಿತ್ತು.

ಆದರೆ ವಿಮಾನ ವಿಳಂಬವಾಗಿ ಆಗಮಿಸಿದ್ದರಿಂದ ಮುಖ್ಯ ಭಾಷಣಕಾರರಾದ ಮೀನಾಕ್ಷಿ ಲೇಖಿ ಹಾಗೂ ಸುಮಲತಾ ಉಪ್ಪೂರಿಗೆ ಆಗಮಿಸುವಾಗ ಸಮಯ ಮಧ್ಯಾಹ್ನದ ಒಂದು ಗಂಟೆ ದಾಟಿತ್ತು. ಎರಡು ಗಂಟೆಗಳ ಕಾರ್ಯಕ್ರಮ ಎಂದು ಹೇಳಿ ಮಹಿಳೆಯರನ್ನು ಕರೆತಂದಿದ್ದಲ್ಲದೇ, ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಊಟವೂ ಇಲ್ಲದಿರುವುದನ್ನು ತಿಳಿದ ಮಹಿಳೆಯರು ಮೀನಾಕ್ಷಿ ಲೇಖಿ ಆಗಮಿಸಿ ಹಿಂದಿಯಲ್ಲಿ ಭಾಷಣ ಆರಂಭಿಸುವ ವೇಳೆಗಾಗಲೇ ಜಾಗ ಖಾಲಿ ಮಾಡಿದ್ದರು.

ಹೀಗಾಗಿ ಲೇಖಿ ಅವರ ನೀರಸ ಭಾಷಣವನ್ನು ಖಾಲಿ ಕುರ್ಚಿಗಳು ಹಾಗೂ ಉಪಸ್ಥಿತರಿದ್ದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಮಾತ್ರ ಆಲಿಸುವಂತಾಯಿತು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News