ರಮಾಕಾಂತ ಪುರಾಣಿಕರಿಗೆ ಪಿಎಚ್‌ಡಿ ಪದವಿ

Update: 2024-04-29 12:40 GMT

ಉಡುಪಿ, ಎ.29: ಬಂಟಕಲ್ಲು ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಎಚ್.ಜೆ. ಮಾರ್ಗದರ್ಶನದಲ್ಲಿ ರಮಾಕಾಂತ ಪುರಾಣಿಕ್ ಎಚ್. ‘ಸ್ಟಡೀಸ್ ಆನ್ ದಿ ಪಿಜಿಕಲ್ ಆ್ಯಂಡ್ ಎನ್‌ಎಲ್‌ಓ ಪ್ರೊಪರ್ಟಿಸ್ ಆಫ್ ಹಲೋಜಿನ್ ಸಬ್‌ ಸ್ಟಿಟ್ಯುಟೆಡ್ ನೋವೆಲ್ ಚಾಲ್ಕೊನ್ಸ್’ ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿಯನ್ನು ನೀಡಿದೆ.

ರಮಾಕಾಂತ ಪುರಾಣಿಕ್ ಎಂಎಸ್ಸಿ, ಎಂಟೆಕ್, ಎಂಫಿಲ್ ಪದವೀಧರ ರಾಗಿದ್ದು, ಪ್ರಸ್ತುತ ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಹಟ್ಟಿಯಂಗಡಿ ಗಣಪತಿ ಪುರಾಣಿಕ್ ಮತ್ತು ಶಾರದಾ ಪುರಾಣಿಕ್ ದಂಪತಿ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News