ಮಾಹೆಯಿಂದ ವಿಶೇಷ ಘಟಿಕೋತ್ಸವ: ಕೆ.ವಿ.ಕಾಮತ್‌ಗೆ ಡಾಕ್ಟರೇಟ್

Update: 2024-04-29 16:23 GMT

ಉಡುಪಿ, ಎ.29: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇಂದು ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಸಭಾಂಗಣದಲ್ಲಿ ಆಯೋಜಿಸಿದ ವಿಶೇಷ ಘಟಿಕೋತ್ಸವ ಸಮಾರಂಭದಲ್ಲಿ ಎನ್‌ಎಬಿಎಫ್‌ಐಡಿ ಹಾಗೂ ಜಿಲೋಯ ಫೈನಾನ್ಸಿಯಲ್ ಸರ್ವಿಸಸ್‌ನ ಅಧ್ಯಕ್ಷ ಕೆ.ವಿ.ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಐಸಿಐಸಿಐ ಬ್ಯಾಂಕ್ ಬಹಾಗೂ ಎನ್‌ಡಿಬಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಕೆ.ವಿ.ಕಾಮತ್‌ರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿದ ಮಾಹೆಯ ಕುಲಪತಿ ಲೆ.ಜ.(ಡಾ)ಎಂ.ಡಿ.ವೆಂಕಟೇಶ್, ಕೆ.ವಿ. ಕಾಮತ್ ಅವರ ಗಮರ್ನಾಹ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡುತ್ತಿರುವುದಕ್ಕೆ ತನಗೆ ವಿಶೇಷ ಹೆಮ್ಮೆ ಎನಿಸಿಸುತ್ತದೆ ಎಂದರು.

ಕಾಮತ್ ಅವರ ಒಳನೋಟಗಳು ಮತ್ತು ಅನುಭವಗಳು ಭಲಿಷ್ಯದ ನಾಯಕರನ್ನು ರೂಪಿಸಲು ಹಾಗೂ ಜಗತ್ತಿನಲ್ಲಿ ಸಕಾ ರಾತ್ಮಕವಾದ ಬದಲಾವಣೆಗೆ ಪೂರಕವಾಗಿ ಕೊಡುಗೆ ನೀಡುತ್ತಿದೆ ಎಂದು ಅವರು ಅಭಿನಂದಿಸಿ ಮಾತನಾಡಿದರು.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಕೆ.ವಿ.ಕಾಮತ್, ಮಾಹೆಯ ಈ ಗೌರವವನ್ನು ವಿನಮ್ರತೆಯಿಂದ ಸ್ವೀಕರಿಸು ತಿದ್ದೇನೆ.ನನ್ನ ವೃತ್ತಿ ಬದುಕಿನುದ್ದ ಕ್ಕೂ ನಾನು ಭಾರತದ ಸಂಸ್ಥೆಗಳನ್ನು ಜಾಗತಿಕ ಭೂಪಟದಲ್ಲಿ ಇರಿಸಲು ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿಪಾದಿಸಲು ಶ್ರಮಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಾಸಂತಿ ಆರ್. ಪೈ, ಮಾಹೆ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬೆಂಗಳೂರು ಎಂಇಎಂಜಿಯ ಅಧ್ಯಕ್ಷ ಡಾ. ರಂಜನ್ ಆರ್. ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಮಾಹೆಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ ಕಿಣಿ, ಡಾ. ದಿಲೀಪ್ ಜಿ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News