ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಚಿಕ್ಕಬಳ್ಳಾಪುರದ ಬಾಲಕನ ರಕ್ಷಣೆ

Update: 2024-04-30 12:04 GMT

File Photo 

ಮಲ್ಪೆ: ಮಲ್ಪೆ ಬೀಚ್‌ನ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಬಾಲಕನೋರ್ವನನ್ನು ಜೀವರಕ್ಷಕ ತಂಡ ರಕ್ಷಿಸಿರುವ ಘಟನೆ ಇಂದು ನಡೆದಿದೆ.

ರಕ್ಷಿಸಲ್ಪಟ್ಟ ಬಾಲಕನನ್ನು ಚಿಕ್ಕಬಳ್ಳಾಪುರದ ಶ್ರೇಯಸ್(12) ಎಂದು ಗುರುತಿಸಲಾಗಿದೆ.

ಕುಟುಂಬ ಸಮೇತ ಬೀಚ್‌ಗೆ ಭೇಟಿ ನೀಡಿದ ಶ್ರೇಯಸ್ ನೀರಿನಲ್ಲಿ ಆಡುವಾಡುತ್ತಿದ್ದನು. ಈ ವೇಳೆ ಆತ ನೀರಿನಲ್ಲಿ ಅಕಸ್ಮಿಕವಾಗಿ ಮುಳುಗಿರುವುದು ಕಂಡು ಬಂದಿದ್ದು, ಕರ್ತವ್ಯದಲ್ಲಿದ್ದ ಲೈಪ್‌ಗಾರ್ಡ್‌ಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ್ದಾರೆಂದು ತಿಳಿದುಬಂದಿದೆ. ಇದೀಗ ಬಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News