ಡಿಕೆಎಸ್‌ಸಿ ಅಲ್‌ಇಹ್ಸಾನ್ ಸನದುದಾನ ಮಹಾಸಮ್ಮೇಳನಕ್ಕೆ ಚಾಲನೆ

Update: 2024-05-02 16:00 GMT

ಉಡುಪಿ, ಮೇ 2: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ಅಧೀನ ಸಂಸ್ಥೆ ಮುಳೂರಿನ ಮರ್ಕಝ್ ತಅ್‌ಲೀಮಿಲ್ ಇಹ್ಸಾನ್ ಇದರ ಅಲ್ ಇಹ್ಸಾನ್ ದಅವಾ ಕಾಲೇಜಿನ ಸನದುದಾನ ಮಹಾಸಮ್ಮೇಳನಕ್ಕೆ ಇಂದು ಚಾಲನೆ ನೀಡಲಾಯಿತು.

ಮೂಳುರು ಮರ್ಕಝ್ ಕ್ಯಾಂಪಸಿನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಈ ಸಮ್ಮೇಳನವನ್ನು ಸೌದಿ ಅರೆಬಿಯಾ ಅಲ್ ಮುಝೈನ್ ಇದರ ಸಿಇಓ ಅಲ್‌ಹಾಜ್ ಝಕರಿಯ್ಯ ಉದ್ಘಾಟಿಸಿದರು. ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆ ನೆರವೇರಿಸಿದರು.

ಅಧ್ಯಕ್ಷತೆಯನ್ನು ಡಿಕೆಎಸ್‌ಸಿ ಯುಎಇ ರಾಷ್ಟ್ರೀಯ ಕಮಿಟಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ತ್ವಾಹ ಬಾಫಖೀಹ್ ತಂಳ್ ವಹಿಸಿದ್ದರು. ಮುಖ್ಯ ಪ್ರಭಾಷಣ ರಾಗಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್ ಮೊದಲಾದವರು ಉಪಸ್ಥಿತರಿದ್ದರು. ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್‌ನ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿದರು.

ಜೋಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಹಾಜಿ ಜೋಕಟ್ಟೆ, ಅಲ್ ಇಹ್ಸಾನ್ ಸನದುದಾನ ಸ್ವಾಗತ ಸಮಿತಿ ಕೋಶಾಧಿ ಕಾರಿ ಹಾಜಿ ಅಬ್ದುಲ್ ಖಾದರ್, ಜಮೀಯ್ಯತುಲ್ ಫಲಾಹ್ ಉಡುಪಿ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಶಭೀ ಅಹ್ಮದ್ ಖಾಝಿ, ಹೂಡೆ ದಾರುಸ್ಸಲಾಂ ಸ್ಕೂಲ್‌ನ ಅಧ್ಯಕ್ಷ ಅಶ್ರಫ್, ಪಕೀರ್ಣಕಟ್ಟೆ ಮಸೀಜಿ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಬೆಳಪು ಮಸೀದಿ ಅಧ್ಯಕ್ಷ ಕರೀಂ ಹಾಜಿ, ಮಲ್ಲಾರು ಅಹ್ಮದಿಯಾಮೊಹಲ್ಲ ಜಾಮೀ ಮಸೀದಿ ಅಧ್ಯಕ್ಷ ಝಕೀರ್ ಹುಸೈನ್, ಬೆಳಪು ಮಿನಾರ್ ಮಸೀದಿ ಅಧ್ಯಕ್ಷ ಮುಹಮ್ಮದ್ ಅಕ್ರಂ, ಕೊಂಬಗುಡ್ಡೆ ಗೌಸಿಯಾ ಜಾಮೀಯ ಮಸೀದಿ ಅಧ್ಯಕ್ಷ ನಸೀರ್ ಅಹ್ಮದ್ ಶರಫುದ್ದೀನ್ ಉಪಸ್ಥಿತರಿದ್ದರು.

ಬೆಳಗ್ಗೆ ಕಟಪಾಡಿ ಜುಮಾ ಮಸೀದಿಯ ಖತೀಬ್ ಬಶೀರ್ ಮದನಿ ನೇತೃತ್ವದಲ್ಲಿ ಮೂಳೂರು ಸಯ್ಯಿದ್ ಅರಬೀ ವಲಿಯುಲ್ಲಾಹಿರವರ ಮಖಾಂ ಝಿಯಾರತಿನೊಂದಿಗೆ ಚಾಲನೆ ನೀಡಲಾಯಿತು. ಸ್ವಾಗತ ಸಮಿತಿ ಚಯರ್‌ಮ್ಯಾನ್ ಹಾಜಿ ನೇಜಾರು ಅಬೂಬಕ್ಕರ್ ದ್ವಜಾರೋಹಣಗೈದರು.

ಮೇ 4ರಂದು ಸನದುದಾನ -ಸಮಾರೋಪ

ಮೇ 3ರಂದು ಬೆಳಿಗ್ಗೆ 7ಗಂಟೆಗೆ ಖತಮುಲ್ ಕುರಾನ್ ಮಜ್ಲಿಸ್ ಜರಗಲಿದ್ದು ಮಧ್ಯಾಹ್ನ 3.30ಕ್ಕೆ ಗ್ರ್ಯಾಂಡ್ ಅಲ್ಯುಮಿನಿ ಕಾರ್ಯಕ್ರಮ ನಡೆಯಲಿದೆ. ಮಗ್ರಿಬ್ ನಮಾಜಿನ ನಂತರ ಕುಂಬೋಳ್ ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್ ನೇತೃತ್ವದಲ್ಲಿ ಜಲಾಲಿಯಾ ಮಜ್ಲಿಸ್ ನಡೆಯಲಿದೆ.

ಮೇ 4ರಂದು ಬೆಳಗ್ಗೆ 9.30ಕ್ಕೆ ಮಹಿಳಾ ಪದವಿ ಪ್ರಧಾನ ಕಾರ್ಯಕ್ರಮ ಹಾಗೂ ಝಹರತುಲ್ ಕುರ್‌ಆನ್ ಕಾನ್ವಕೇಶನ್ ನಡೆಯಲಿದೆ. ಮರ್ಕಝ್ ಉಪಾಧ್ಯಕ್ಷ ವಳವೂರು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಝೀಕ್ಯೂ ಕಾರ್ಯಕ್ರಮವನ್ನು ಝೀ ಕ್ಯೂನ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅರ್‌ಹರಿ ಕಾತಪುರಂ ಉದ್ಘಾಟಿಸಲಿರುವರು. ಮಧ್ಯಾಹ್ನ 2ಗಂಟೆಗೆ ಡಿಕೆಎಸ್ಸಿ ಸಂಗಮ ಮತ್ತು ಮುಅಲ್ಲಿ, ಮುತಅಲ್ಲಿಂ ಹಾಗೂ ಉಲಮಾ ಸಂಗಮ ನಡೆಯಲಿದೆ.

ಸಂಜೆ 5.30ಕ್ಕೆ ಸನದುದಾನ ಹಾಗೂ ಸಮಾರೋಪ ಸಮಾರಂಭವು ಅಸ್ಸಯ್ಯಿದ್ ಕೆ.ಎಸ್.ಆಟಕ್ಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಅಸ್ಸಯ್ಯಿದ್ ಅಲಿ ಬಾಪಖಿ ತಂಳ್ ಆಶಿರ್ವಚನ ನೀಡಲಿರುವರು. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಉದ್ಘಾಟಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News