ಕೋಳಿ ಅಂಕಕ್ಕೆ ದಾಳಿ: ಐವರ ಬಂಧನ

Update: 2024-05-02 16:30 GMT

ಕಾರ್ಕಳ, ಮೇ 2: ನಿಟ್ಟೆ ಗ್ರಾಮದ ಮದನಾಡು ರಾಹುಗುಳಿಗ ದೈವಸ್ಥಾನದ ಬಳಿ ಮೇ 2ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಸಂತೋಷ್, ಅಕ್ಷಯ್, ಸುಜೀತ್, ಬಾಬು, ಜಗದೀಶ ಬಂಧಿತ ಆರೋಪಿಗಳು. ಇವರಿಂದ 1950ರೂ. ನಗದು, ಬಾಳುಕತ್ತಿ, ಕೋಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News