ಮನೆಯ ಟೆರೇಸಿನಿಂದ ಬಿದ್ದು ಮುಖ್ಯ ಶಿಕ್ಷಕ ಮೃತ್ಯು

Update: 2024-05-02 16:31 GMT

ಅಜೆಕಾರು, ಮೇ 2: ಮನೆಯ ಟೆರೇಸಿಯಿಂದ ಕೆಳಗೆ ಬಿದ್ದು ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಮರ್ಣೆ ಗ್ರಾಮದಲ್ಲಿ ಮೇ 1ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಎಣ್ಣೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸುಂದರ(55) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದು, ಬೆಳಗ್ಗೆ ನೋಡುವಾಗ ಮನೆಯ ಅಂಗಳದ ಬಳಿ ಬಿದ್ದಿರುವುದು ಕಂಡುಬಂದಿದೆ.

ಇವರು ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿಯೋ ಅಥವಾ ಇನ್ಯಾವುದೋ ಕಾರಣದಿಂದ ಎದ್ದು ನಡೆದಾಡುವಾಗ ಆಯತಪ್ಪಿ ಟೆರೇಸಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News