ಲೈನ್ ಫಾಲೋವರ್ ತಾಂತ್ರಿಕ ಸ್ಪರ್ಧೆ: ಬಂಟಕಲ್ಲು ಪ್ರಥಮ

Update: 2024-05-08 13:51 GMT

ಶಿರ್ವ, ಮೇ 8: ಮಂಗಳೂರು ಯೆನಪೋಯ ಇನ್‌ಸ್ಟಿಟ್ಯೂಟ್ ಆಪ್‌ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ರೋಬೋ ಸ್ಪರ್ಧೆ ‘ಯೆಂಟೆಕ್ ಮೇನಿಯಾ ರೋಬೋ ಪ್ಯೂಷನ್’ನ ಲಕ್ಷ್ಮಣ್ ರೀಖಾ (ಲೈನ್‌ಪಾಲೋವರ್)ತಾಂತ್ರಿಕ ಸ್ಪರ್ಧೆಯಲ್ಲಿ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ತಂಡ ಪ್ರಥಮ ಸ್ಥಾನಗಳಿಸಿದೆ.

ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಯು.ಪ್ರದ್ಯುನ್ಮಾ ಉಪಾಧ್ಯಾಯ, ಕಿರಣ್ ಭಟ್, ಸಾತ್ವಿಕ್ ಭಟ್ ಮತ್ತು ಸೃಜನ್ ನಾಯರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 12 ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News