ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ

Update: 2024-05-08 15:48 GMT

ಉಡುಪಿ: ಯಕ್ಷಗಾನ ಕಲಾರಂಗದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಸನಿವಾಸ ಶಿಬಿರ ಬುಧವಾರ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ರಿಸರ್ಚ್ ಸೆಂಟರ್‌ನಲ್ಲಿ ಪ್ರಾರಂಭಗೊಂಡಿತು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಕಳೆದ 12 ವರ್ಷಗಳಿಂದ ಅಂಬಲಪಾಡಿ ದೇವಳದಲ್ಲಿ ನಡೆಸುತ್ತಾ ಬಂದ ಅತ್ಯಂತ ಉಪಯುಕ್ತವಾದ ಇಂತಹ ಶೈಕ್ಷಣಿಕ ಶಿಬಿರ ಈ ಬಾರಿ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ.ನಾರಾಯಣ ಸಭಾಹಿತ್ ಮಾತನಾಡಿ ಪ್ರತಿಭಾವಂತ ಬಡ ವಿದ್ಯಾರ್ಥಿ ಗಳ ಉನ್ನತ ಶಿಕ್ಷಣಕ್ಕೆ ಮಾಹೆಯು ಸಂಪೂರ್ಣ ಉಚಿತ ಅವಕಾಶ ಕಲ್ಪಿಸುತ್ತದೆ ಎಂದರಲ್ಲದೇ, ಕಲಾರಂಗದ ಕಾರ್ಯ ಚಟುವಟಿಕೆಗಳಿಗೆ ಮಾಹೆ ಸದಾ ಬೆಂಬಲವನ್ನು ನೀಡುತ್ತದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿಪ್ರೊ.ಉಪೇಂದ್ರ ಸೋಮಯಾಜಿ, ಎಚ್.ನರಸಿಂಹ ಮೂರ್ತಿ, ಯು. ವಿಶ್ವನಾಥ ಶೆಣೈ, ಮರ್ಣೆ ಉಮೇಶ್ ಭಟ್, ಯು.ಎಸ್. ರಾಜಗೋಪಾಲ ಆಚಾರ್ಯ ಭಾಗವಹಿಸಿದ್ದರು.

ಮೈಲೈಫ್ ಹುಬ್ಬಳ್ಳಿ ಇದರ ಸ್ಥಾಪಕ, ಶಿಬಿರದ ನಿರ್ದೇಶಕ ಪ್ರವೀಣ್ ಗುಡಿ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ. ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿ ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಎಂ. ವಂದಿಸಿದರು.

ಮೇ 12ರವರೆಗೆ ನಡೆಯುವ ಈ ಐದು ದಿನಗಳ ಶಿಬಿರದಲ್ಲಿ 220 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News