ಐಪಿಎಲ್ ಬೆಟ್ಟಿಂಗ್ ದಂಧೆ: ಪ್ರಕರಣ ದಾಖಲು

Update: 2024-05-09 13:37 GMT

ಉಡುಪಿ, ಮೇ 9: ಅಕ್ರಮವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಹಲವು ಮಂದಿಯ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 8ರಂದು ಕುಂದಾಪುರ ನಗರದ ಗಾಂಧಿ ಮೈದಾನದ ಸಮೀಪ ಸುದರ್ಶನ್ ಮತ್ತು ಕರ್ತವ್ಯ ಎಂಬವರು ಜೊತೆಯಾಗಿ ಸೇರಿಕೊಂಡು ಬೆಟ್ಟಿಂಗ್ ಮೊಬೈಲ್ ಆ್ಯಪ್ ಮೂಲಕ ಎರಡು ತಂಡಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ಸಂಬಂಧ ಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಕ್ರಮವಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದರೆನ್ನಲಾಗಿದೆ.

ಬೆಟ್ಟಿಂಗ್‌ನಲ್ಲಿ ಸಂಗ್ರಹ ಮಾಡಿದ ಹಣವನ್ನು ಪಡೆದುಕೊಂಡು ಹೋಗಲು ಸ್ಥಳಕ್ಕೆ ಹೆಬ್ರಿ ನಿವಾಸಿ ತೇಜಸ್ ಎಂಬಾತನು ಬರುವ ಬಗ್ಗೆ ಮಾಹಿತಿ ಸೆನ್ ಪೊಲೀಸರಿಗೆ ದೊರೆತಿದೆ. ಈತ ಸುದರ್ಶನ್, ಕರ್ತವ್ಯ ಮತ್ತು ಇನ್ನೂ ಕೆಲವರಿಗೆ ಈ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿಕೊಡುತ್ತಿರುವ ಬಗ್ಗೆ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News