ಉಡುಪಿ: ಎಸೆಸೆಲ್ಸಿ ಫಲಿತಾಂಶದಲ್ಲಿ ಅನುದಾನರಹಿತ ಶಾಲೆಗಳ ಮೇಲುಗೈ

Update: 2024-05-09 15:34 GMT

ಉಡುಪಿ: ಇಂದು ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಅನುದಾನ ರಹಿತ ಶಾಲೆಗಳು ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಹೋಲಿಸಿದರೆ ಉತ್ತಮ ಫಲಿತಾಂಶ ದಾಖಲಿಸಿವೆ. ಅನುದಾನರಹಿತ ಶಾಲೆಗಳ ಶೇ.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶೇ.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನುದಾನ ರಹಿತ ಶಾಲೆಗಳ ಒಟ್ಟು 4348 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 4248 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಅದೇ ರೀತಿ ಸರಕಾರಿ ಶಾಲೆಗಳ 6701 ವಿದ್ಯಾರ್ಥಿಗಳ ಪೈಕಿ 6249 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ಜಿಲ್ಲೆಯ ಅನುದಾನಿತ ಶಾಲೆಗಳ 2969 ವಿದ್ಯಾರ್ಥಿ ಗಳು ಪರೀಕ್ಷೆ ಬರೆದು ಇವರಲ್ಲಿ 2749 ಮಂದಿ ಈ ಬಾರಿ ಪಾಸಾಗಿದ್ದಾರೆ.

ಗ್ರೇಡ್ ವಿವರ: ಜಿಲ್ಲೆಯ ವಿದ್ಯಾರ್ಥಿಗಳ ಪೈಕಿ 1565 ಮಂದಿ (540 ಬಾಲಕರು+1025 ಬಾಲಕಿಯರು) ಎ+ ಗ್ರೇಡ್‌ನಲ್ಲಿ ತೇರ್ಗಡೆಯಾಗಿದ್ದರೆ, 3127 ಮಂದಿ (1275+1852) ಎ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಅದೇ ರೀತಿ 2918 ಮಂದಿ (1435+1483) ಬಿ+ ಗ್ರೇಡ್‌ನಲ್ಲಿ, 2711 ಮಂದಿ (1482+1229) ಬಿ ಗ್ರೇಡ್, 1965 ಮಂದಿ (1252+713) ಸಿ+ ಗ್ರೇಡ್ ಹಾಗೂ 960 ಮಂದಿ (675+285) ಸಿ ಗ್ರೇಡ್‌ನಲ್ಲಿ ಉತ್ತೀರ್ಣ ರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು

1. ಸಹನಾ ಎನ್ -623ಅಂಕ- ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ, 2.ಶೋಧನ ಆರ್.ಹೆಗ್ಡೆ -622-ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ, 3.ಎಸ್.ಸತೀಶ್ -621-ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, 4.ಪ್ರಥ್ವಿತಾ ಪಿ.ಶೆಟ್ಟಿ -621- ಲಿಟ್ಲ್‌ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಯಡಾಡಿ ಮತ್ಯಾಡಿ ಕುಂದಾಪುರ, 5.ರಿಯಾನ್ ಸಲ್ಡಾನಾ -621- ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ.

6.ಚಿನ್ಮಯಿ ಪೈ -621- ಸಾಗರ ವಿದ್ಯಾಮಂದಿರ ಪ್ರೌಢ ಶಾಲೆ ಪಡುಬಿದ್ರಿ, 7.ಸಂಕೇತಾ ಎಚ್.ಎಸ್. -621- ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಏಜು ಉಡುಪಿ, 8.ಸಮರ್ಥ ಜೋಶಿ -621(ಕನ್ನಡ ಮಾಧ್ಯಮ)- ಸರಸ್ವತಿ ಮಂದಿರ ಪ್ರೌಢ ಶಾಲೆ ಉಚ್ಚಿಲ, 9. ಪ್ರತೀಕ್ ಜೈನ್ -621- ಸರಕಾರಿ ಜೂನಿಯರ್ ಕಾಲೇಜು ಸಾಣೂರು ಕಾರ್ಕಳ, 10. ಅವ್ನಿ ಪಿ. ಜೈನ್ -620- ಸೆಕ್ರೇಡ್‌ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಬಜಗೋಳಿ ಕಾರ್ಕಳ.

11.ಅಕ್ಷಿತಾ ವಿ.ಹೆಗ್ಡೆ -620-ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪಿಯು ಕಾಲೇಜ್ ಕಾರ್ಕಳ, 12. ಶ್ರೇಯಾ ಎಸ್.ಆಚಾರ್ -619- ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ, 13.ವಿಭಾ -619- ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ, 14.ಪಾರ್ಣಿಕಾ -619- ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ, 15. ಧನುಶ್ರೀ -619-ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆ ಕುಂದಾಪುರ.

16.ಸಜ್ನಿ ಎಸ್.ಕುಲಾಲ್ -619-ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಕಾರ್ಕಳ, 17.ಕೌಸ್ತುಭ -619- ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಿರಿಮಂಜೇಶ್ವರ ಬೈಂದೂರು, 18.ಪ್ರತೀಕ್ಷಿತಾ -619- ಸರಕಾರಿ ಜೂನಿಯರ್ ಕಾಲೇಜು ಕಂಬದಕೋಣೆ ಕುಂದಾಪುರ, 19.ರಿಥಿಕಾ ಕೆ. -619- ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಿರಿಮಂಜೇಶ್ವರ ಬೈಂದೂರು, 20.ಸುಹಾನ್ ನಾರಾಯಣ ಬಿಲ್ಲವ -619- ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಿರಿಮಂಜೇಶ್ವರ ಬೈಂದೂರು, 21.ಶ್ರೀವತ ವಿ. -619-ಕ್ರಿಶ್ಚಿಯನ್ ಹೈಸ್ಕೂಲ್ ಉಡುಪಿ.

ಉಡುಪಿ ಜಿಲ್ಲೆಯ 98 ಶಾಲೆಗಳಿಗೆ ಶೇ.100 ಫಲಿತಾಂಶ

ಇಂದು ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಒಟ್ಟು 98 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ. ಇವುಗಳಲ್ಲಿ 28 ಸರಕಾರಿ ಶಾಲೆಗಳಾದರೆ, 21 ಅನುದಾನಿತ ಹಾಗೂ 49 ಅನುದಾನರಹಿತ ಶಾಲೆಗಳಿವೆ.

ಸರಕಾರಿ ಶಾಲೆಗಳು: ಸರಕಾರಿ ಪ್ರೌಢ ಶಾಲೆ ಉಡುಪಿ ದಕ್ಷಿಣ, ಕುಂದಾಪುರ, ಉಡುಪಿ ಉತ್ತರ, ಕಾರ್ಕಳ, ಬೈಂದೂರು, ಆನಂದ ಶೆಟ್ಟಿ ಸರಕಾರಿ ಹೈಸ್ಕೂಲ್ ಕಾರ್ಕಳ, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ಜಾ) ಉಡುಪಿ ಉತ್ತರ, ಹುರ್ಲಾಡಿ ಶ್ರೀರಘುವೀರ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಕಾರ್ಕಳ, ಸರಕಾರಿ ಸಂಯುಕ್ತ ಪ್ರೌಢ ಶಾಲೆ ಕಾರ್ಕಳ,ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಿಸಿ) ಕಾರ್ಕಳ, ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಿಸಿ) ಬೈಂದೂರು, ಕುಂದಾಪುರ, ಉಡುಪಿ ದಕ್ಷಿಣ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಎಸ್‌ಸಿ) ಕುಂದಾಪುರ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ (ಪ.ಪಂ) ಕುಂದಾಪುರ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ಜಾ.) ಉಡುಪಿ ದಕ್ಷಿಣ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News