×
Ad

ಫಾರ್ಮಸಿ ಬಂದ್ ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ

Update: 2026-05-20 13:08 IST

ಉಡುಪಿ, ಮೇ 20: ಆನ್‌ಲೈನ್ ಔಷಧಿ ಮಾರಾಟ ಮತ್ತು ಇ ಕಾಮರ್ಸ್ ಸಂಸ್ಥೆಗಳ ಅನಿಯಂತ್ರಿತ ವ್ಯವಹಾರವನ್ನು ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ನೀಡಿದ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ನೂರಾರು ಫಾರ್ಮಸಿಗಳು ಬಂದ್ ಆಚರಿಸಿದವು.

ಈ ಬಂದ್‌ಗೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಈಗಾಗಲೇ ಬೆಂಬಲ ಸೂಚಿಸಿವೆ. ಅದರಂತೆ ಮೇ19ರ ರಾತ್ರಿ 12ಗಂಟೆಯಿಂದ ಮೇ 20ರ ರಾತ್ರಿ 12 ಗಂಟೆಯವರೆಗೆ ಉಡುಪಿ ಜಿಲ್ಲಾ ಹೋಲ್‌ಸೇಲ್ ವ್ಯಾಪಾರಸ್ಥರು ಹಾಗೂ ಸರ್ಜಿಕಲ್ ವ್ಯಾಪಾರಸ್ಥರು ತಮ್ಮ ಸಂಸ್ಥೆಗಳನ್ನು ಬಂದ್ ಮಾಡಿದ್ದಾರೆ.

ಆದರೆ ಅಪೋಲೋ ಫಾಮರ್ಸಿ, ಮೆಡ್‌ಪ್ಲಸ್ ಮೆಡಿಕಲ್‌ಗಳು, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು, ಜಿಲ್ಲಾಸ್ಪತ್ರೆಯ ಮೆಡಿಕಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News