×
Ad

ಭಟ್ಕಳ: ಕಾರಿನಲ್ಲಿ ಗಾಂಜಾ ಸಾಗಾಟ; ಮೂವರು ಆರೋಪಿಗಳ ಬಂಧನ

Update: 2024-11-10 20:44 IST

ಭಟ್ಕಳ: ತೆಂಗಿನಗುಂಡಿ ಕ್ರಾಸ್‌ನಲ್ಲಿ ಚಲಿಸುತ್ತಿದ್ದ ಕಾರು ತಡೆದು, 9 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ರವಿವಾರ ಸಂಜೆ 6 ಗಂಟೆಗೆ ನಡೆದಿದೆ ಎಂದು ತಿಳಿದುಬಂದಿದೆ. ಭಟ್ಕಳ ನಗರ ಪೊಲೀಸರು ಶಿರಸಿ ನೋಂದಣಿಯ ಟ್ಯಾಕ್ಸಿಯನ್ನು ತಡೆದು, ಕಾರಿನಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಭಟ್ಕಳದ ಗುಲ್ಮಿ ನಿವಾಸಿ ಅಕ್ರಮ್ (24), ಅಬ್ದುಲ್ ರಹಮಾನ್ ಶೇಖ್ (27), ಶಿರಸಿಯ ಅಝರುದ್ದೀನ್ (41) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News