ಭಟ್ಕಳ: ಶಾಲಾ ವಾಹನ ಮತ್ತು ಲಾರಿ ನಡುವೆ ಅಪಘಾತ; ಇಬ್ಬರಿಗೆ ಗಾಯ
Update: 2025-03-03 17:58 IST
ಭಟ್ಕಳ : ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಶಾಲಾ ವಾಹನ ನಡುವೆ ನಡೆದ ಅಪಘಾತದಲ್ಲಿ ಶಾಲಾ ವ್ಯಾನ್ ಚಾಲಕ ಮತ್ತು ಸಹಾಯಕಿ ಮಹಿಳೆ ಗಾಯಗೊಂಡಿದ್ದಾರೆ.
ಅಪಘಾತ ಸೋಮವಾರ ಮಧ್ಯಾಹ್ನ 12:30ರ ಸುಮಾರಿಗೆ ಕ್ವಾಲಿಟಿ ಹೋಟೆಲ್ ಬಳಿ ಸಂಭವಿಸಿದೆ. ಮಕ್ಕಳನ್ನು ಬಿಟ್ಟು ಶಾಲೆಗೆ ಹಿಂದಿರುಗುತ್ತಿದ್ದ ವೇಳೆ, ಲಾರಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಡಿಕ್ಕಿ ಸಂಭವಿಸಿದ್ದು, ಶಾಲಾ ವ್ಯಾನ್ ಮುಂಭಾಗ ನಜ್ಜುಗುಜ್ಜಾಗಿದೆ.
ಘಟನೆಯಲ್ಲಿ ರಹ್ಮತ್ ಆಬಾದ್ ಮತ್ತು ಮದೀನಾ ಕಾಲೋನಿಯ ನಿವಾಸಿ ಚಾಲಕ ಮೊಹಮ್ಮದ್ ಇಷಾಂ (22) ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.ವ್ಯಾನ್ ಸಹಾಯಕಿ ಶೆಹನಾಝ್ ಫಯಾಝ್ (24), ಮೊಗಲಿ ಹೊಂಡಾ ನಿವಾಸಿ, ಕೂಡ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.