×
Ad

ಭಟ್ಕಳ: ಮನೆಗೆ ನುಗ್ಗಿ ವೃದ್ಧೆಯ ಚಿನ್ನಾಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು; ಪ್ರಕರಣ ದಾಖಲು

Update: 2025-03-17 22:07 IST

ಭಟ್ಕಳ: ಮನೆಯೊಳಗೆ ನುಗ್ಗಿದ ಕಳ್ಳರು ವೃದ್ಧೆಯ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಮೌಲಾನಾ ಅಬುಲ್ ಕಲಾಂ ಆಝಾದ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಸೋಮವಾರ ಘಟನೆ ಬಗ್ಗೆ ಮಾಹಿತಿ ಲಭ್ಯವಾಯಿತು.

ಭಟ್ಕಳದ ಉದ್ಯಮಿ ಅಲ್ತಾಫ್ ಕೋಲಾ ಅವರ ಪ್ರಕಾರ, ಕಳ್ಳತನ ಅವರ ಅಕ್ಕನ ಮನೆಯಲ್ಲಿ ನಡೆದಿದೆ. ಅವರ ಸೋದರಳಿಯ ತಜ್ಮಲ್ ಹುಸೇನ್ ಬೆಳಗ್ಗಿನ ನಮಾಝಿಗೆ ಮಸೀದಿಗೆ ತೆರಳಿದಾಗ, ಕಳ್ಳರು  ಮನೆಯೊಳಗೆ ನುಗ್ಗಿದ್ದಾರೆ. ಬೆಳಗ್ಗೆ 6:15ರ ಸುಮಾರಿಗೆ ತಜ್ಮಲ್ ಮರಳಿದಾಗ, 92 ವರ್ಷದ ವೃದ್ಧೆ ಬೀಬಿ ಸಾರಾ ಅವರ ಕೋಣೆಯಲ್ಲಿ ಕಳ್ಳತನ ಕೃತ್ಯ ನಡೆದಿರುವುದು ಗೊತ್ತಾಗಿದೆ. ಬೀಬಿ ಸಾರಾ ಅವರ ಕತ್ತಿನಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಹಾರ ಮತ್ತು ಕೈಯಲ್ಲಿದ್ದ 78 ಗ್ರಾಂ ತೂಕದ ಎಂಟು ಬಳೆಗಳನ್ನು ಕಿತ್ತು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಘಟನೆ ಸಮಯದಲ್ಲಿ ಬೀಬಿ ಸಾರಾ ಹಾಸಿಗೆಯಲ್ಲಿದ್ದರೆ, ಮನೆಯ ಇತರ ಸದಸ್ಯರು ನಮಾಝ್‌ ನಲ್ಲಿದ್ದರು. ಈ ಸಂದರ್ಭ ಕಳ್ಳನು ವೃದ್ಧೆಯ ಬಾಯಿಯನ್ನು ಮುಚ್ಚಿ, ಆಭರಣಗಳನ್ನು ಬಲವಂತವಾಗಿ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸಿಸಿಟಿವಿಯಲ್ಲಿ ಕಳ್ಳನ ದೃಶ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News