ಸಿದ್ಧಾಪುರ | ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ನಿಧನ
Update: 2025-03-05 11:04 IST
ಸಿದ್ದಾಪುರ: ಪತ್ರಕರ್ತ, ಸಿದ್ದಾಪುರ ತಾಲೂಕಿನ ಶಿವಶಂಕರ್ ಕೋಲಸಿರ್ಸಿ (44) ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಟಿವಿ-9 ಚಾನೆಲ್ ನಲ್ಲಿ ಕೆಲ ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲಾ ವರದಿಗಾರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕನ್ನಡ ಜನಾಂತರಂಗ ಸೇರಿದಂತೆ ಸ್ಥಳೀಯ ಎರಡು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸದ್ಯ ರಾಜ್ ನ್ಯೂಸ್ ನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ವರದಿಗಾರಿಕೆ ಜೊತೆಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕರಾಗಿ ಕೂಡ ಕೆಲಸ ಮಾಡುತ್ತಿದ್ದರು.
ಮಂಗಳವಾರ ತಡರಾತ್ರಿ ಏಕಾಏಕಿಯಾಗಿ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಅವರು ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.