ಕೊಟ್ಟೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ನಾಲ್ವರು ಕಳ್ಳರ ಬಂಧನ
Update: 2026-06-08 19:22 IST
ವಿಜಯನಗರ: ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದ ಗುಂತಕಲ್ಲು ಜಿಲ್ಲೆಯ ಭಾಗ್ಯ ನಗರದ ಶಿಕಾರಿ ಮದ್ದಲಟ್ಟಿ ಮದನ್ , ಗಣೇಶ, ಬಾಲಚಂದ್ರ ಹಾಗೂ ಪಗಲಿ ಅಶೋಕ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ.
ಮನೆಗಳ್ಳತನ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ 6 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಆಭರಣಗಳನ್ನು ಹಾಗೂ 20,000ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಡಿ.ದುರುಗಪ್ಪ ಇವರ ನೇತೃತ್ವದಲ್ಲಿ ಪಿ.ಎಸ್.ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ಶಂಕ್ರಪ್ಪ, ದೊಡ್ಡಬಸವನಗೌಡ, ಸಿದ್ದೇಶ್, ಎಚ್.ಬಸವರಾಜ್, ಶಶಿಧರ್, ಕುಮಾರ ಪತ್ರಿ, ಎಂ.ಎಂ.ಶಶಿಧರ್, ಪಿ.ರಮೇಶ್, ಚಿದಾನಂದ ಕಾರ್ಯಾಚರಣೆ ತಂಡದಲ್ಲಿದ್ದರು.
ಈ ಕಾರ್ಯಚರಣೆಗೆ ಎಸ್‌ಪಿ ಎಸ್.ಜಾಹ್ನವಿ, ಎಎಸ್‌ಪಿ ಜಿ ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.