Harapanahalli | ಬೇಸಿಗೆ ಶಿಬಿರಗಳು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತವೆ : ಸುವರ್ಣ ಆರುಂಡಿ ನಾಗರಾಜ್
ಹರಪನಹಳ್ಳಿ : ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಕಲ್ಪನಾ ಶಕ್ತಿ ಹಾಗೂ ತಂಡದ ಸಹಕಾರ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್ ಹೇಳಿದರು.
ನಗರದ ಕಾಶಿಮಠ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಕತ್ತಲೆ ಬೆಳಕು ಟ್ರಸ್ಟ್ ಆಯೋಜಿಸಿದ್ದ ನಾಲ್ಕನೇ ವರ್ಷದ “ಚಿಲಿಪಿಲಿ ಚಿಣ್ಣರ ಮೇಳ” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಸೃಜನಾತ್ಮಕ ರಂಗಭೂಮಿ ಶಿಬಿರಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಶಿಬಿರದಲ್ಲಿ ಅಭಿನಯ, ರಂಗಭೂಮಿ ಆಟಗಳು, ಕಥೆ ಹೇಳುವಿಕೆ, ರಂಗಗೀತೆ, ಸಂಭಾಷಣೆ ಅಭ್ಯಾಸ, ದೇಹಭಾಷೆ ಹಾಗೂ ಧ್ವನಿ ತರಬೇತಿ ಸೇರಿದಂತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ವೇದಿಕೆಯ ಮೂಲಕ ಅದನ್ನು ಹೊರತರುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಆರುಂಡಿ ನಾಗರಾಜ್, ಶಿಕ್ಷಕರಾದ ಚನ್ನಬಸಪ್ಪ ಹಾಗೂ ಶೋಭ, ಕತ್ತಲೆ ಬೆಳಕು ಟ್ರಸ್ಟ್ ಅಧ್ಯಕ್ಷ ಅರುಣ ಕುಮಾರ್ ಮೇದಾರ, ರಂಗ ನಿರ್ದೇಶಕ ಸೋಮಶೇಖರ್ ಕಾರಿಗನೂರು, ಟಿ. ಶ್ಯಾಮಲಾ ಸೇರಿದಂತೆ ಪೋಷಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.