×
Ad

ಕೂಡ್ಲಿಗಿ | ಮಹಿಳೆ ನಾಪತ್ತೆ

Update: 2026-06-18 23:32 IST

ಶೃತಿ

ವಿಜಯನಗರ(ಹೊಸಪೇಟೆ): ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ನಿವಾಸಿಯಾದ ಶೃತಿ (ಸು.25 ವರ್ಷ) ಎಂಬ ಮಹಿಳೆ ಕಾಣೆಯಾಗಿದ್ದು, ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಹಿಳೆ ಸುಮಾರು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಮಹಿಳೆ ಮನೆಯಿಂದ ಹೋಗುವಾಗ ಹಸಿರು ಬಣ್ಣದ ನೈಟಿ ಧರಿಸಿದ್ದರು.

ಈ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News