ಕೆಂಭಾವಿ | ಸಾಹಿತಿ ನಿಂಗನಗೌಡ ದೇಸಾಯಿಗೆ ‘ಸಾಧಕ ರತ್ನ’ ಪ್ರಶಸ್ತಿ
ಕೆಂಭಾವಿ: ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ಕೆಂಭಾವಿ ಪುರಸಭೆ ವ್ಯಾಪ್ತಿಯ ಪರಸನಹಳ್ಳಿ ಗ್ರಾಮದ ಸಾಹಿತಿ ಹಾಗೂ ಸಂಶೋಧಕ ನಿಂಗನಗೌಡ ಹ. ದೇಸಾಯಿ ಪರಸನಹಳ್ಳಿ ಅವರಿಗೆ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಬುರಗಿಯ ಡಾ. ರಾಜಕುಮಾರ್ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಲಾಸಂಘ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 5ನೇ ವರ್ಷದ ಶಿಕ್ಷಕರ ಉತ್ಸವ–2026 ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ನಿಂಗನಗೌಡ ದೇಸಾಯಿ ಅವರು ಮೂರು ದಶಕಗಳಿಂದ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆ, ಸಾಹಿತ್ಯದ ಮೇಲಿನ ಆಸಕ್ತಿ ಹಾಗೂ ಸಂಶೋಧನಾ ಕೊಡುಗೆಯನ್ನು ಗುರುತಿಸಿ ಸಂಘವು ಈ ಗೌರವ ನೀಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಚಲನಚಿತ್ರ ನಿರ್ದೇಶಕ ಅಮರಪ್ರಿಯ ಹಿರೇಮಠ, ಸಂಘದ ಗೌರವ ಕಾರ್ಯದರ್ಶಿ ಡಾ. ವಿಜಯಕುಮಾರ್ ಗೋತಗಿ, ಅಧ್ಯಕ್ಷ ರಮೇಶ ಯಾಳಗಿ, ಸಾಹಿತಿ ನಾಗೇಂದ್ರಪ್ಪ ಮಾಡ್ಯಾಳ, ಪ್ರಾಂಶುಪಾಲ ಡಾ. ನೀಲಕಂಠ ಟಿ. ಕಣ್ಣಿ, ರಮಾದೇವಿ ಬಿ. ದುಗ್ಗನೂರ, ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಿತಿನ್ ಭೀಮರಾವ್ ಹಾಗೂ ತೇಗಲ್ ತಿಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.