ಸುರಪುರ | ಮಲ್ಲಾ ಬಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಸುರಪುರ: ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಕೊಂಬಿನ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗೌಡಪ್ಪಗೌಡ ವಣಿಕ್ಯಾಳ ಅವರು ಪಂಚಶೀಲ ಧ್ವಜಾರೋಹಣ ನೆರವೇರಿಸಿದರೆ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲನಗೌಡ ತಳೆವಾಡ ಅವರು ನೀಲಿ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌಡಪ್ಪಗೌಡ ವಣಿಕ್ಯಾಳ, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಆಸ್ತಿ. ಅವರ ಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು ಎಂಬ ಅಂಬೇಡ್ಕರ್ ಅವರ ಮಾತಿನಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಶಿಕ್ಷಣದಿಂದ ಜಾತೀಯತೆ, ಮೇಲು–ಕೀಳು ಭಾವನೆ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕೊಡಿಸುವುದು ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರಮೇಶ್ ಗೌಡ ಅರಕೇರಿ, ಬಸನಗೌಡ ಕಲಗೊಂಡ, ಗೋಲ್ಲಾಳಪ್ಪಗೌಡ, ಪಪ್ಪುಗೌಡ ಪೊಲೀಸ್ ಪಾಟೀಲ್, ಸುಭಾಷ್ ಪಾಟೀಲ್ ಸುಭಾನಿ, ಮಾನಪ್ಪ ಬಡಿಗೇರ, ಸಂಗಣ್ಣ ಬಡಿಗೇರ ವಕೀಲರು, ಶಿವಪ್ಪ ಬಡಿಗೇರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ ದೊರೆ, ಮರುಳಸಿದ್ದಪ್ಪ, ಬಸವರಾಜ ತಳವಾರ, ಮಹೇಶ್ ಸಜ್ಜನ್, ಮಾಜಿ ಗ್ರಾಪಂ ಅಧ್ಯಕ್ಷ ಮರೇಪ್ಪ ಗೌಂಡಿ, ದವಲಸಾಬ್ ಮುಲ್ಲಾ, ಮಾಜಿ ಗ್ರಾಪಂ ಉಪಾಧ್ಯಕ್ಷ ವೀರಣ್ಣ ಬಡಿಗೇರ, ಪರಶುರಾಮ ದೊರೆ, ಶಂಕರ್ ಗೌಂಡಿ, ಮಂಜುನಾಥ ಗೋಡೆಕರ್, ಬಸವರಾಜ ದೊರೆ, ಶರಣು ದೇವರಮನಿ, ನಿಂಗಣ್ಣ ಕುಂಬಾರ, ಬಂದೇನವಾಜ್ ಸಾಸನೂರ, ಚಿದಾನಂದ ತಳವಾರ, ರಮೇಶ್ ದೊರೆ, ಮಾಂತೇಶ, ನಿಂಗು ದೊರೆ, ರಫೀಕ್ ಮುಜೇವಾರ, ನಾಗರಾಜ ಕೊಂಬಿನ, ಗುರಪ್ಪ ತಳವಾರ, ಸುಧಾಕರ ಬಡಿಗೇರ, ಸಂಗಪ್ಪ ಬಡಿಗೇರ, ರಾಜು ಮ್ಯಾಗೇರಿ, ಹಳ್ಳೆಪ್ಪ ಗೌಂಡಿ, ಆಕಾಶ್ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.