×
Ad

ಯಾದಗಿರಿ | ಧಾರಕಾರ ಮಳೆ : ಬಳಿಚಕ್ರ ಬಡಾವಣೆಯ 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

24 ಗಂಟೆಯಲ್ಲಿ ಸಮಸ್ಯೆ ಬಗೆ ಹರಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ: ಉಮೇಶ್ ಮುದ್ನಾಳ್‌ ಎಚ್ಚರಿಕೆ

Update: 2025-09-13 18:45 IST

ಯಾದಗಿರಿ: ಜಿಲ್ಲೆಯ ಕೆಲ ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ಸಾರ್ವಜನಿಕರು ಕಂಗಾಲಾಗಿದ್ದು, ಸಾಂಕ್ರಾಮಿಕ ರೋಗದ ಬೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು 24 ಗಂಟೆ ಒಳಗಡೆ ಸಮಸ್ಯೆ ಬಗೆಹರಿಸದಿದ್ದರೆ ಮುಖ್ಯ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಬಡವಣೆಗೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಜನ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಏಕಾಏಕಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ದವಸ ಧಾನ್ಯಗಳು ಹಾಗೂ ಜಾನುವಾರುಗಳಿಗೆ ಶೇಖರಣೆ ಮಾಡಿದ ಮೇವು ಸಂಪೂರ್ಣ ನೀರು ಪಾಲಾಗಿದೆ. ಅಲ್ಲಿನ ಸಾರ್ವಜನಿಕರು ಗುಡಿ ಗುಂಡಾರ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ್‌ ಅವರು ಮಾತನಾಡಿ, 24 ಗಂಟೆಗಳ ಒಳಗಡೆ ಮನೆಗಳಿಗೆ ನುಗ್ಗಿದ ಕಲುಶಿತ ನೀರನ್ನು ತೆಗೆದು ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕ. ಹಾಗೂ ಅಲ್ಲಿನ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದ ಬೀತಿ ಹೆಚ್ಚಾಗಿದ್ದು, ಅವರಿಗೆಲ್ಲ ಆರೋಗ್ಯ ತಪಾಸಣೆ ಮಾಡಬೇಕು. ಒಂದು ವೇಳೆ ನಿರ್ಲಕ್ಷ ತೋರಿದರೆ ಮುಖ್ಯ ರಸ್ತೆ ಬಂದ್ ಮಾಡಿ ಹೋರಾಟ ಮಾಡುವುದಾಗಿ ತಿಳಿಸಿದರು.

ಬಳಿಕ ಉಮೇಶ್ ಮುದ್ನಾಳ ಭೇಟಿ ಸುದ್ದಿ ತಿಳಿಯುತಿದ್ದಂತೆ ಕಂದಾಯ ಇಲಾಖೆಯ ಸಿಬ್ಬಂಧಿಗಳು, ಸೈದಾಪುರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ನೀವು ಹೇಳಿದ ಹಾಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು 24 ಗಂಟೆಯೊಳಗಡೆ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಚರಡ್ಡಿ ಬೋಯಿನ್, ಗುಂಜಲಪ್ಪ, ದೇವಿಂದ್ರ ಬೋಮ್ಮಣ್, ಹಣಮಂತ ಧೋತ್ರೆ, ಬಸವರಾಜ ಬೋಳಿ, ಸಿದ್ದಪ್ಪಗೌಡ, ಯಂಕಪ್ಪ ಬೇಳಿಗೇರಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಪೂಜಾರಿ, ವೆಂಕಟೇಶ್ ನಾಯಕ್, ತಾಯಪ್ಪ ಬಿಳ್ಹಾರ್, ಮಶಪ್ಪ ಸಂಜೀವಿನಿ, ಬಸವರಾಜ ನಾಯಕ್, ಮಶಪ್ಪ, ಸಾಬಣ್ಣ, ನರಸಪ್ಪ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News