ಯಾದಗಿರಿ | ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆ : ಪ್ರಕರಣ ದಾಖಲು
Update: 2025-09-07 17:01 IST
ಯಾದಗಿರಿ: ಜಿಲ್ಲೆಯ ಗುರುಮಠಕಲ್ ಹೊರವಲಯದ ಶ್ರೀಲಕ್ಷ್ಮೀ ವೆಂಕಟೇಶ್ವರ್ ಇಂಡಸ್ಟ್ರಿಸ್ ರೈಸ್ ಮಿಲ್ನಲ್ಲಿ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.
ಅಕ್ಕಿಯ ಅಕ್ರಮ ದಾಸ್ತಾನಿನ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಶ್ರೀಲಕ್ಷ್ಮೀ ವೆಂಕಟೇಶ್ವರ್ ಇಂಡಸ್ಟ್ರಿಸ್ ರೈಸ್ ಮಿಲ್ ಮೇಲೆ ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶನಿವಾರ ರಾತ್ರಿ 9 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯ ವೇಳೆ ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿದೆ. ಅದನ್ನು ಪಾಲಿಶ್ ಮಾಡಿ ‘ಡಬಲ್ ಸ್ಟಾರ್’ ಹಾಗೂ ‘ಡೈನಾಸ್ಟಿ’ ಎಂಬ ಬ್ರಾಂಡ್ ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡಿ ರಾಜ್ಯದ ವಿವಿಧೆಡೆ ಹಾಗೂ ನೆರೆ ರಾಜ್ಯಗಳಿಗೂ ಮಾರಾಟ ಮಾಡುವ ಸಂಚು ನಡೆದಿದೆ ಎಂಬುದು ಬೆಳಕಿಗೆ ಬಂದಿದೆ.
ಅಧಿಕಾರಿಗಳು ಅಕ್ರಮವಾಗಿ ಕೂಡಿಟ್ಟ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.