ಯಾದಗಿರಿ | ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ
ಯಾದಗಿರಿ: ಸೆ.22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆ ವೇಳೆ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಾರ, ಬಡಿಗೇರ, ಅಕ್ಕಸಾಲಿಗ, ಪತ್ತಾರ, ವಿಶ್ವಬ್ರಾಹ್ಮಣ ಹೀಗೆ ಉಪಜಾತಿಗಳನ್ನು ಬರೆಯಿಸದೇ ಎಲ್ಲರೂ ಒಂದಾಗಿ ಹಿಂದೂ ವಿಶ್ವಕರ್ಮ ಎಂದೇ ಬರೆಯಬೇಕೆಂದು ಮನವಿ ಮಾಡಿದ್ದಾರೆ.
ಹಿಂದೇ ನಡೆಸಿದ ಸಮೀಕ್ಷೆ ಸರಿಯಾಗಿಲ್ಲ, ರಾಜ್ಯದಲ್ಲಿ ಒಟ್ಟು ಸುಮಾರು 45 ಲಕ್ಷ ಜನರು ವಿಶ್ವಕರ್ಮ ಜನರಿದ್ದು, ಅಲ್ಲಿ ಕೇವಲ 15 ಲಕ್ಷ ಜನರೆಂದು ತೊರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಕಾರಣ, ಈಗ ನಡೆಯುವ ಸಮೀಕ್ಷೆ ವೇಳೆ ನಾವೇ ಬೇರೆ, ಬೇರೆಯಾಗಿ ಬರೆಸಿದರೇ ನಮ್ಮ ಜನಸಂಖ್ಯೆಯ ನಿಖರ ಮಾಹಿತಿ ಸಿಗುವುದಿಲ್ಲ ಎಂದರು.
ಸೆ.17 ರಂದು ನಡೆಯುವ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಎಲ್ಲರೂ ಭಾಗವಹಿಸಬೇಕು. ಎಸ್ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಕೆಯಲ್ಲಿ ಶೇ.70 ರಷ್ಟು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದೆಂದರು.
ಇದಕ್ಕಾಗಿ ಬನ್ನಪ್ಪ ಕಾಳಬೆಳಗುಂದಿ 70194023439, ದೇವೇಂದ್ರಪ್ಪ ತಳವಾರಗೇರಿ 8660620887, ಗಣೇಶ ಪತ್ತಾರ 9980778380, ಮನೋಹರ 9448561261, ಶ್ರೀನಿವಾಸ 8095760145 ಮತ್ತು ಬನ್ನಪ್ಪ ಬಿಳ್ಹಾರ 9901546261 ಅವರನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಮಹಾಸಭೆಯ ಪ್ರಮುಖರಾದ ದೇವೀಂದ್ರಪ್ಪ ವಡಗೇರಿ, ರಮೇಶ ಹತ್ತಿಕುಣಿ, ಶಿವಣ್ಣ ಹೂನುರು, ಮೌನೇಶ ನಾಯ್ಕಲ್, ಹಣಮಂತ್ರಾಯ ಉಳ್ಳೆಸೂಗುರು, ಜೀವಣ್ಣ ನಾಯ್ಕಲ್, ಮೌನಪ್ಪ ಪಸಪುಲ್, ಬನ್ನಪ್ಪ ಕಾಳೆಬೆಳಗುಂದಿ ಮತ್ತು ಶೇಖರ ತಾತಾ ಮುಸ್ಠೂರ ಸೇರಿದಂತೆಯೇ ಇತರರಿದ್ದರು.