ಯಾದಗಿರಿ: ಜಿಲ್ಲೆಯ ರೈತರಿಗೆ ಹೇಳಿದಷ್ಟು ಪರಿಹಾರ ನೀಡದೆ ಕಡಿಮೆ ಹಣ ನೀಡಿದ್ದನ್ನು ಖಂಡಿಸಿದ ಬಳ್ಳಾರ, ಹೊನಗೇರಾ ಮತ್ತು ಹಾಲಗೇರಾ ಗ್ರಾಮಗಳ ನೂರಾರು ರೈತರು ಬುಧವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಮಗೆ ಬಂದ ಹಣದ ಚೆಕ್ ಜತೆ 500 ಸೇರಿಸಿ ವಾಪಾಸ್ಸು ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.  

ಈ ವೇಳೆ ಸರಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳ್ಳಾರದ ರೈತ ಸದಾಶಿವರೆಡ್ಡಿ ಪಾಟೀಲ ಅವರು ತಮಗೆ ಬಂದಿದ್ದ 1500 ರೂ.ಚೆಕ್ ಬದಲಿಗೆ 500 ರೂ.ಸೇರಿಸಿ 2 ಸಾವಿರ ರೂ.ಚೆಕ್ ಸರ್ಕಾರಕ್ಕೆ ಕಳುಹಿಸಿ ಎಂದು ಜಿಲ್ಲಾಡಳಿತದ ಪರವಾಗಿ ಮನವಿ ಸ್ವೀಕರಿಸಲು ಆಗಮಿಸಿದ ಅಧಿಕಾರಿಗೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿದ್ದಾಮರೆಡ್ಡಿ ಪಾಟೀಲ್ ಹೊನಗೇರಾ, ಮಲ್ಲಪ್ಪ ಹುಳಗೋಳ, ಮಲ್ಲಿಕಾರ್ಜುನ ಕೊನಗೇರಾ, ರಾಜು ಕೊಳ್ಳಿ, ಭೀಮರಾಯ ಬಿಳ್ತಾರ, ಮರೆಪ್ಪ ಬಳ್ಳಾರ, ಸಾಬಣ್ಣಾ, ಮಲ್ಲಿಕಾರ್ಜುನ ಕೊಟಗೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor