ಬ್ರಿಟನ್ ನಗರದ ಪ್ರಥಮ ಸಿಖ್ ಮೇಯರ್ ನಿಧನ
ಲಂಡನ್, ಜ.7: ಬ್ರಿಟನ್‌ನ ಲೀಸೆಸ್ಟರ್ ನಗರದ ಮೊದಲ ಸಿಖ್ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕುಲ್‌ದೀಪ್ ಸಿಂಗ್ ಭಟ್ಟಿ(80) ಲಂಡನ್‌ನಲ್ಲಿ ನಿಧನರಾಗಿದ್ದಾರೆ.ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕುಲ್‌ದೀಪ್ ಸಿಂಗ್, ಹೊಸ ವರ್ಷದ ದಿನಾಚರಣೆಯ ಸಂದರ್ಭದಲ್ಲಿ ತನ್ನ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ. ಕುಲ್‌ದೀಪ್ ಸಿಂಗ್ ಭಟ್ಟಿಯವರು ಲೀಸೆಸ್ಟರ್ ಸಿಟಿ ಕೌನ್ಸಿಲ್‌ನ ರುಶೆಮೀಡ್ ವಾರ್ಡನ್ನು 1983ರಿಂದ ಕಳೆದ ವರ್ಷದವರೆಗೂ ಪ್ರತಿನಿಧಿಸಿದ್ದರು. ಜೂನ್ 2005ರಲ್ಲಿ ಬ್ರಿಟನ್ ರಾಣಿಯ ಜನ್ಮದಿನ ಗೌರವಾರ್ಥ ಸಮಾರಂಭದ ‘ಆರ್ಡರ್ ಆಫ್ ಮೆಂಬರ್ ಆಫ್ ಬ್ರಿಟಿಷ್ ಎಂಪಾಯರ್’ ಪ್ರಶಸ್ತಿಗೂ ಕುಲ್‌ದೀಪ್ ಸಿಂಗ್ ಪಾತ್ರರಾಗಿದ್ದರು.
Next Story