ಪಠಾಣ್ಕೋಟೆ ದಾಳಿ ಪ್ರಕರಣದ ತನಿಖೆಗೆ ಜೆಐಟಿ ರಚನೆಗೆ ಪಾಕ್ಪ್ರಧಾನಿ ನವಾಝ್ ಶರೀಫ್ ಆದೇಶ

ಕರಾಚಿ, ಜ.11: ಪಠಾಣ್ಕೋಟೆ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣದ ತನಿಖೆಗೆ ಜಂಟಿ ತನಿಖಾ ತಂಡ(ಜೆಐಟಿ) ರಚನೆಗೆ ಪಾಕ್ ಪ್ರಧಾನಿ ನವಾಝ್ ಶರೀಫ್ಆದೇಶ ನೀಡಿದ್ಧಾರೆ.
ಪಠಾಣ್ಕೋಟೆ ವಾಯುನೆಲೆಯ ಮೇಲೆ ದಾಳಿ ನಡೆಸಿದವರಿಗೆ ಪಾಕಿಸ್ತಾನದ ಸಂಪರ್ಕದ ಬಗ್ಗೆ ತನಿಖೆ ನಡೆಸಲು ಜೆಐಟಿ ರಚಿಸಲು ಶರೀಫ್ ಶಿಫಾರಸು ಮಾಡಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ತಿಳಿಸಿದೆ.
ಪಾಕಿಸ್ತಾನದ ಐಬಿ, ಐಎಸ್ಐ ಮತ್ತು ಎಂಐ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪ್ರಧಾನಿ ಶರೀಫ್ ಜೆಐಟಿ ರಚನೆಗೆ ಆದೇಶ ನೀಡಿದ್ಧಾರೆ.
ಜೆಐಟಿ ರಚನೆಗೆ ಶಿಫಾರಸು ಮಾಡುವ ಮೂಲಕ ಇಸ್ಲಾಮಾಬಾದ್ನಲ್ಲಿ ಜ.೧೫ರಂದು ನಿಗದಿಯಾಗಿರುವ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ದ್ವಿಪಕ್ಷೀಯ ಮಾತುಕತೆ ಪೂರ್ವ ನಿಗದಿಯಂತೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಪಾಕ್ ಪ್ರಧಾನಿ ನವಾಝ್ ಶರೀಫ್ ಪಠಾಣ್ಕೋಟ್ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರದಲ್ಲಿ ತಳಮಟ್ಟದಿಂದಲೇ ತನಿಖೆ ನಡೆಸಲು ಆಸಕ್ತಿ ವಹಿಸಿದ್ದಾರೆಂದು ಪಾಕ್ ಪತ್ರಿಕೆಯೊಂದು ವರದಿ ಮಾಡಿದೆ.