ಮಾನ್ಯತೆ ನೀಡಲು ಕ್ರಿಯಾ ಯೋಜನೆ
ಬೆಂಗಳೂರು, ಜ. 22: ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲ್ಲ ಸಂಸ್ಥೆಗಳನ್ನು ಮಾನ್ಯತೆಗೊಳಪಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ರಾಜ್ಯದ ದಾವಣಗೆರೆ, ಹುಬ್ಬಳ್ಳಿ, ಕಲಬುರಗಿ, ಮೈಸೂರು, ಮಂಗಳೂರು, ಬೆಂಗಳೂರು ವಲಯಗಳಲ್ಲಿ ಮಾನ್ಯತೆಗೆ ಸಂಬಂಧಿಸಿದ ಸಂವಾದಾತ್ಮಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.ಕ್ರಿಯಾ ಯೋಜನೆಯ ಮುಂದಿನ ಭಾಗವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯು ಸಂಸ್ಥೆಗಳನ್ನು ಗುರುತಿಸಿ ಮಾನ್ಯತೆಯನ್ನು ಪಡೆಯಲು ಅಗತ್ಯವಿರುವ ಕ್ರಮಗಳನ್ನು ಇಲಾಖೆ ವತಿಯಿಂದ ಕೈಗೊಂಡು, ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಕಾರ್ಯ ಪ್ರವೃತ್ತರಾಗಲು ಸೂಚಿಸಲಾಗಿದೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.
Next Story