ಮಾ.15ರವರೆಗೆ ಗ್ರಂಥಾಲಯ ಇಲ್ಲ
ಬೆಂಗಳೂರು, ಜ. 22: ಕಬ್ಬನ್ ಉದ್ಯಾನವನದಲ್ಲಿರುವ ಬೆಂಗಳೂರು ಗ್ರಂಥಾಲಯ ಕಟ್ಟಡದ ದುರಸ್ತಿ ಕಾಮಗಾರಿ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಸಾರ್ವಜನಿಕರನ್ನು ನಿರ್ಬಂಧಿಸುವುದು ಅಗತ್ಯವಿರುವುದರಿಂದ ಗ್ರಂಥಾಲಯವನ್ನು ಜ.27ರಿಂದ ಮಾ.15ರವರೆಗೆ ಮುಚ್ಚಲಾಗುತ್ತದೆ. ಓದುಗರು ಸಮೀಪದಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳಾದ, ನಗರ ಕೇಂದ್ರ ಗ್ರಂಥಾಲಯ, ಕೇಂದ್ರ ವಲಯ, ಕೆ.ಎಚ್.ರಸ್ತೆ, ಬೆಂಗಳೂರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ಶಾಖಾ ಗ್ರಂಥಾಲಯ, ರಿಚ್ಮಂಡ್ ಟೌನ್ ಶಾಖಾ ಗ್ರಂಥಾಲಯ, ಗಾಂಧಿ ಭವನ ಶಾಖಾ ಗ್ರಂಥಾಲಯ, ಚಾಮರಾಜಪೇಟೆ ಶಾಖಾ ಗ್ರಂಥಾಲಯ, ಕಬ್ಬನ್ ಪಾರ್ಕ್ನಲ್ಲಿರುವ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಆವರಣ(ಪತ್ರಿಕಾ ವಿಭಾಗ ಮಾತ್ರ) ಗ್ರಂಥಾಲಯಗಳನ್ನು ಉಪಯೋಗಿಸಬಹುದೆಂದು ಕೋರಿದೆ.
Next Story